ವಾರ್ಧಾ ಚಂಡಮಾರುತ: ಆಂಧ್ರಪ್ರದೇಶದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

vardhaಹೈದರಾಬಾದ್:ಡಿ-12: (www.justkannada.in)ವಾರ್ಧಾ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ಹಾಗೂ ಆಂಧ್ರ ಪ್ರದೇಶದ ಕರಾವಳಿ ಭಾಗದ ನಗರಗಳು ತತ್ತರಿಸಿ ಹೋಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಆಂಧ್ರದಲ್ಲಿ ಚಂಡಮಾರುತ ಅಪ್ಪಳಿಸುವುದಕ್ಕೆ ಮುಂಚಿತವಾಗಿಯೇ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದೆ.

ಭಾರಿ ಗಾಳಿ, ಮಳೆಗೆ ಆಂಧ್ರಪ್ರದೇಶದ ತಾಡಾ ಗ್ರಾಮದಲ್ಲಿ ಮರಗಳು ಧರಾಶಾಹಿಯಾಗುತ್ತಿವೆ. ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಮುಂಜಾಗರೂಕತಾ ಕ್ರಮವಾಗಿ ಸುಮಾರು 10,000 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಆಂಧ್ರ ಪ್ರದೇಶದಿಂದ ವಿವಿಧ ಭಾಗಗಳಿಗೆ ಎಲ್ಲಾ ರೈಲು, ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ. ನೌಕಾಪಡೆ ಮತ್ತು ನೈಸರ್ಗಿಕ ವಿಪತ್ತು ನಿರ್ವಹಣಾ ತಂಡಗಳು ಕಾರಾಚರಣೆಗೆ ಸನ್ನದ್ಧವಾಗಿ ನಿಂತಿವೆ.
ಮುಂದಿನ 36 ತಾಸುಗಳ ಕಾಲ ಮೀನುಗಾರರು ಸಮುದ್ರಕ್ಕೆ ಹೋಗದಂತೆ ದಕ್ಷಿಣ ಆಂಧ್ರಪ್ರದೇಶ, ಉತ್ತರ ತಮಿಳುನಾಡು ಹಾಗೂ ಪುದುಚೇರಿ ಕರಾವಳಿಗಳಲ್ಲಿ ಮುನ್ನೆಚ್ಚರಿಕೆ ನೀಡಲಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ. ನೆಲಕ್ಕೆ ಅಪ್ಪಳಿಸಿದ ಬಳಿಕವೂ ವಾರ್ಧಾ ಚಂಡಮಾರುತ ದುರ್ಬಲವಾಗುವ ಲಕ್ಷಣ ಇಲ್ಲವೆಂದು ಹವಾಮಾನ ಇಲಾಖೆ ಹೇಳಿದೆ.

ಮುಂದಿನ 36 ತಾಸುಗಳ ಕಾಲ ದಕ್ಷಿಣ ಕರಾವಳಿ ಆಂಧ್ರ ಪ್ರದೇಶ, ಉತ್ತರ ಕರಾವಳಿ ತಮಿಳು ನಾಡು ಮತ್ತು ಪುದುಚೇರಿಯಲ್ಲಿ ಜಡಿ ಮಳೆ ಆಗಲಿದೆ. ಸಮುದ್ರದಲ್ಲಿ ಏಳುವ ಒಂದು ಮೀಟರ್‌ ಎತ್ತರದ ಹೆದ್ದೆರೆಗಳಿಂದ ಚೆನ್ನೈನ ತಗ್ಗು ಪ್ರದೇಶಗಳಲ್ಲಿ ಮಾತ್ರವ್ಲಲದೆ ತಿರುವಲ್ಲೂರು ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲಿ ಹಾಗೂ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನೀರು ತುಂಬಿಕೊಂಡು ನೆರೆಯ ಸ್ಥಿತಿ ಉಂಟಾಗಲಿದೆ ಎನ್ನಲಾಗಿದೆ.
Cyclone,Vardah,Tamil Nadu, Andhra Pradesh