ಸೈಕ್ಲಿಂಗ್’ನಿಂದ ದೇಹ ಫಿಟ್ ಆಗುವುದರ ಜತೆಗೆ ಖಿನ್ನತೆ, ಒತ್ತಡ, ಆತಂಕ ದೂರವಾಗುತ್ತದೆ !

0
989

ನವದೆಹಲಿ, ಡಿಸೆಂಬರ್ 28 (www.justkannada.in): ದೇಹ ಫಿಟ್ ಮಾಡುವುದರ ಜತೆಗೆ ಖಿನ್ನತೆ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಿಕೊಳ್ಳಲು ಸೈಕಲ್ ಸವಾರಿ ನೆರವಾಗುತ್ತದೆ!

ತಜ್ಞರು ಸೈಕಲ್ ಸವಾರಿಯ ಲಾಭಗಳ ಬಗೆ ಒಂದಷ್ಟು ಅಂಶಗಳನ್ನು ಪಟ್ಟಿ ಮಾಡಿ ಹೇಳಿದ್ದಾರೆ. ಸೈಕ್ಲಿಂಗ್ ಎಂಬುದು ಏರೋಬಿಕ್ಸ್ ವ್ಯಾಯಾಮವಾಗಿದ್ದು, ಇದರಿಂದ ಆರೋಗ್ಯಕ್ಕೆ ಉತ್ತಮ ಲಾಭವಾಗುತ್ತದೆ. ಇದು ಹೃದಯ ಸಂಬಂಧಿತ ಖಾಯಿಲೆಗಳನ್ನು ದೂರಾಗಿಸುತ್ತದೆ.

ಸೈಕಲ್ ಸವಾರಿಯಿಂದ ಮೆದುಳಿನಲ್ಲಿ ಸಿರೊಟೋನಿನ್, ಡೋಪಮೈನ್ ಮತ್ತು ಫೀನಲೆಥೈಲಮೈನ್ ನಂತಹ ರಾಸಾಯನಿಕಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಅದು ನಿಮ್ಮನ್ನು ಖಿನ್ನತೆಯಿಂದ ದೂರವಾಗಿಸಿ ಸಂತಸದಿಂದಿರಿಸುತ್ತದೆ.
ಮೊಣಕಾಲು ಅಥವಾ ಕೀಲು ನೋವಿನಿಂದ ಬಳಲುತ್ತಿರುವ ಮಂದಿ ಸೈಕಲ್ ಸವಾರಿ ಮಾಡುವುದು ಅತ್ಯಂತ ಒಳ್ಳೆಯದು
ಮಧುಮೇಹದಿಂದ ಬಳಲುತ್ತಿರುವ ಜನರು ಸೈಕ್ಲಿಂಗ್ ಮಾಡುವಾಗ ಅವರು ತಾವು ದೃಢವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಟೈಪ್ 1 ಡಯಾಬಿಟೀಸ್ ಇರುವವರು ಒಂದು ಗಂಟೆಗೆ ಹೆಚ್ಚು ಕಾಲ ಸೈಕಲ್ ಸವಾರಿ ಮಾಡುವುದಾದರೆ ಹೆಚ್ಚು ಕಾರ್ಬೋಹೈಡ್ರೇಟ್ಸ್ ಇರುವ ಆಹಾರ ತೆಗೆದುಕೊಳ್ಳುವುದು ಅಗತ್ಯ. ಸೈಕ್ಲಿಂಗ್ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರಾಗಿಸುತ್ತದೆ. ಇದು ಹಿಮ್ಮಡಿ ಮತ್ತು ಮೊಣಕಾಲಿನ ಕೀಲುಗಳ ಮೇಲೆ ಒತ್ತಡ ಹಾಕಿ ಕಾಲುಗಳ ಸ್ನಾಯುಗಳ ಆರೋಗ್ಯ ಕಾಪಾಡುವಂತೆ ಮಾಡುತ್ತದೆ.

ಓಡುವುದಕ್ಕೆ ಅಥವಾ , ಬೈಕ್ ರೈಡ್ ಗೆ ಹೋಲಿಸಿದಾಗ ಅವುಗಳು ನಮ್ಮ ಕಾಲುಗಳು, ಮೊಣಕಾಲಿನ ಕೀಲುಗಳ ಮೇಲೆ ತುಂಬಾ ಕಡಿಮೆ ಒತ್ತಡ ಹಾಕುತ್ತದೆ, ಸೈಕ್ಲಿಂಗ್ ಮಾತ್ರ ಕಾಲುಗಳ ಸ್ನಾಯುಗಳನ್ನು ಚುರುಕಾಗಿಡಬಲ್ಲದು. ಸೈಕಲ್ ಸವಾರಿಯು ಹೃದಯ ಮತ್ತು ಶ್ವಾಸಕೋಶವನ್ನು ಆರೋಗ್ಯವಾಗಿಡಬಲ್ಲದು, ರಕ್ತದ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆ ಬರುವ ಸಾದ್ಯತೆ ಕಡಿಮೆಯಾಗಲಿದೆ.