ಮೈಸೂರು,ಫೆಬ್ರವರಿ,13,2018(www.justkannada.in): ನಾಡಿನೆಲ್ಲೇಡೆ ಮಹಾ ಶಿವರಾತ್ರಿ ಆಚರಣೆ  ನಡೆಸಲಾಗುತ್ತಿದ್ದು, ಮೈಸೂರಿನಲ್ಲಿಯೂ ಸಂಭ್ರಮ ಸಡಗರ ಮನೆ ಮಾಡಿದೆ.cultural-city-shivaratri-mysore-people-temples

ಸಾಂಸ್ಕೃತಿಕ ನಗರೀ ಮೈಸೂರಿನಲ್ಲಿ ಶಿವರಾತ್ರಿ ಹಬ್ಬದ ಹಿನ್ನಲೆ ಅರಮನೆ ಆವರಣದಲ್ಲಿರುವ ತೀನೇಶ್ವರ ದೇವಾಲಯದಲ್ಲಿ ಮಹಾ ರುದ್ರಾಭಿಷೇಕ,ಬಿಲ್ಲ ಪತ್ರ,ವಿವಿಧ ಹೂಗಳಿಂದ ವಿಶೇಷ ಪೂಜಾ ಕೈಕಂರ್ಯಗಳು ಜರುಗಿದವು.cultural-city-shivaratri-mysore-people-temples

ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ರವರು ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಜನನ ಹೊಂದಿದ ಸಂದರ್ಭದಲ್ಲಿ ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಸ್ಥಾನಕ್ಕೆ ಶಿವನ ಮೂರ್ತಿಗೆ 11 ಕೆಜಿ ತೂಕದ ಚಿನ್ನದ ಕೊಳಗವನ್ನು ಉಡುಗೊರೆಯಾಗಿ ನೀಡಿದ್ದರಂತೆ .

ಅಂದಿನಿಂದ ಪ್ರತಿ ಶಿವರಾತ್ರಿಯಂದು ವಿಶೇಷವಾಗಿ ಶಿವನ ಮೂರ್ತಿಗೆ ಚಿನ್ನದ ಕೊಳಗವನ್ನು ಧಾರಣೆ ಮಾಡಲಾಗುತ್ತದೆ. ಚಿನ್ನದ ಕೊಳಗ ತೊಟ್ಟು ತ್ರೀನೇಶ್ವರ ಸ್ವಾಮಿ ಕಂಗೊಳಿಸುತ್ತಾನೆ.

ಇನ್ನೂ ಕರ್ನಾಟಕದ ದಕ್ಷಿಣ ಕಾಶಿಯಲ್ಲಿಯೂ ಶಿವರಾತ್ರಿ ಸಂಭ್ರಮ ಮನೆ ಮಾಡಿದ್ದು, ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ .ಸಾಂಸ್ಕೃತಿಕ ನಗರೀಯ ಪ್ರಮುಖ ಶಿವನ ದೇವಾಲಯಗಳಲ್ಲಿಯೂ ಅಭಿಷೇಕ, ಪೂಜೆ ಪುನಸ್ಕಾರ ನಡೆಯುತ್ತಿದ್ದು, ವಿವಿಧ ಪುಷ್ಪಗಳಿಂದ ದೇವಾಲಯಗಳು ಜಗಮಗಿಸುತ್ತಿದೆ.

ಮುಂಜಾನೆಯಿಂದ ಶಿವನ ದರ್ಶನ ಪಡೆಯಲು ಕೈಯಲ್ಲಿ ಬಿಲ್ಲ ಪತ್ರೆ ಹಿಡಿದು ಶಿವ ಶಿವ ಎಂದು ಶಿವನನ್ನ ಸ್ಮರಿಸುತ್ತಾ ದೇವಾಲಯಕ್ಕೆ  ತಂಡೋಪ ತಂಡವಾಗಿ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.

Key words: Cultural city -Shivaratri -Mysore: People -temples.