ನವದೆಹಲಿ, ನವೆಂಬರ್ 09 (www.justkannada.in): ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇನ್ ಸ್ಟಾ ಗ್ರಾಮ್ ನಲ್ಲಿ ಹಾಕುವ ಪೋಸ್ಟ್ ಗಳಿಂದಲೂ ಕೋಟಿ ಕೋಟಿ ಗಳಿಸುತ್ತಿದ್ದಾರೆ…

ಯೆಸ್. ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಮತ್ತು ಜಾಹಿರಾತುಗಳನ್ನು ಹೊರತು ಪಡಿಸಿಯೂ ಬೇರೆ ಬೇರೆ ಮೂಲಗಳಿಂದ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಅವರ ಇನ್ ಸ್ಟಾ ಗ್ರಾಮ್ ನ ಒಂದು ಪೋಸ್ಟ್’ನಿಂದ ಬರೊಬ್ಬರಿ 3.2 ಕೋಟಿ ರೂ. ಗಳಿಸುತ್ತಿದ್ದಾರೆ.

ಈ ಬಗ್ಗೆ ಕ್ರೀಡಾ ವೆಬ್ ಸೈಟ್ ವೊಂದು ವರದಿ ಮಾಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಒಂದು ಇನ್ ಸ್ಟಾಗ್ರಾಂ ಪೋಸ್ಟ್ ಬರೊಬ್ಬರಿ 3.2 ಕೋಟಿ ಹಣ ಗಳಿಕೆ ಮಾಡುತ್ತದೆಯಂತೆ. ವಿರಾಟ್ ಕೊಹ್ಲಿ ಇನ್ ಸ್ಟಾಗ್ರಾಂ ನಲ್ಲಿ ಬರೊಬ್ಬರಿ 15 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ್ದು, ಟ್ವಿಟರ್ ನಲ್ಲಿ 20 ಮಿಲಿಯನ್ ಹಾಗೂ ಫೇಸ್ ಬುಕ್ ನಲ್ಲಿ 36 ಮಿಲಿಯನ್ ಫಾಲೋವರ್ ಗಳಿದ್ದಾರೆ.

ಕೊಹ್ಲಿಯ ಈ ಅಭೂತಪೂರ್ವ ಅಭಿಮಾನಿಗಳ ಫಾಲೋಯಿಂಗ್ ನಿಂದಾಗಿಯೇ ಅವರು ಜಾಹಿರಾತು ಸಂಸ್ಥೆಗಳ ಕಣ್ಣುಕುಕ್ಕುತ್ತಿದ್ದು, ಇದೇ ಕಾರಣಕ್ಕೆ ಅವರಿಗೆ ಕೋಟಿ ಕೋಟಿ ಹಣ ನೀಡಿ ಜಾಹಿರಾತು ಸಂಸ್ಥೆಗಳು ಜಾಹಿರಾತುಗಳಲ್ಲಿ ಬಳಸಿಕೊಳ್ಳುತ್ತಿವೆ.