ಕಂತು ಕಟ್ಟಲಾಗದೇ ಕಾರು ಬಚ್ಚಿಟ್ಟಿದ್ದ ಪಾಂಡ್ಯ: ಹಳೆಯ ಕಷ್ಟಗಳನ್ನು ಮೆಲುಕು ಹಾಕಿದ ಕ್ರಿಕೆಟಿಗ

0
763

ಮುಂಬೈ, ಡಿಸೆಂಬರ್ 07 (www.justkannada.in): ಒಂದೊಂದು ರೂಪಾಯಿಗೂ ಕಷ್ಟಪಡುವ ಸ್ಥಿತಿಯಿತ್ತು. ಸಾಲದ ಕಂತು ಕಟ್ಟಲಾಗದೆ 2 ವರ್ಷ ನನ್ನ ಕಾರನ್ನು ಬಚ್ಚಿಟ್ಟಿದ್ದೆ…

ಇದು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕಷ್ಟದ ದಿನಗಳು… ಸಂದರ್ಶನವೊಂದರಲ್ಲಿ ಪಾಂಡ್ಯ, ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಐಪಿಎಲ್‌’ಗೂ ಮುನ್ನಾ ನನ್ನ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. 3 ವರ್ಷ ಸಾಕಷ್ಟು ಕಷ್ಟ ಪಟ್ಟಿದ್ದೆ. 2015ರ ಐಪಿಎಲ್ ಬಳಿಕ ಜೀವನವೇ ಬದಲಾಯಿತು. ಮುಂಬೈ ತಂಡ ಆ ಬಾರಿ ಚಾಂಪಿಯನ್ ಆಗುತ್ತಿದ್ದಂತೆ 50 ಲಕ್ಷ ದೊರೆಯಿತು ಎಂದು ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.

ಮೊದಲು ಜೀವನ ನಿರ್ವಹಣೆ ಅಷ್ಟು ಸುಲಭವಾಗಿರಲಿಲ್ಲ. ಆದರೆ ದೇವರ ದಯೆಯಿಂದ ನನ್ನ ಬದುಕು ಬದಲಾಯಿತು. ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಗಳಿಸಿತು. ಇದರ ಬೆನ್ನಲ್ಲೇ ನನಗೆ ಸಿಕ್ಕ 50 ಲಕ್ಷ ಹಣದಲ್ಲಿ ಹಳೆ ಕಾರಿನ ಇಎಂಐ ಕಂತು ಕಟ್ಟಿದೆ. ಜೊತೆಗೆ ಹೊಸ ಕಾರನ್ನೂ ಖರೀದಿಸಿದೆ ಎಂದು ಪಾಂಡ್ಯ ಆ ದಿನಗಳನ್ನು ಹೇಳಿಕೊಂಡಿದ್ದಾರೆ.