ಮೀರತ್, ನವೆಂಬರ್ 13 (www.justkannada.in): ಟೀಂ ಇಂಡಿಯಾದ ವೇಗಿ ಭುವನೇಶ್ವರ್ ಕುಮಾರ್ ಗೆ ಕಂಕಣ ಭಾಗ್ಯ ಕೂಡಿಬಂದಿದ್ದು ಪ್ರೇಯಸಿ ನೂಪುರ್ ನಗರ್ ಜತೆ ನವೆಂಬರ್ 23ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಭುವನೇಶ್ವರ್ ಕುಮಾರ್ ಮದುವೆ ಕುರಿತಂತೆ ಭುವಿ ತಂದೆ ಕಿರಣ್ ಪಾಲ್ ಸಿಂಗ್ ಮಾಹಿತಿ ನೀಡಿದ್ದು ನವೆಂಬರ್ 23ರಂದು ಮೀರತ್ ನಲ್ಲಿ ಭುವಿ ಮದುವೆ ಸಮಾರಂಭ ನಡೆಯಲಿದ್ದು ನವೆಂಬರ್ 26 ಮೀರತ್ ನಲ್ಲಿ ಹಾಗೂ 30ರಂದು ನವದೆಹಲಿಯಲ್ಲಿ ಔತಣಕೂಟ ಏರ್ಪಡಿಸಲಾಗಿದೆ.

ನೂಪುರ್ ನಗರ್ ಗ್ರೇಟರ್ ನೊಯ್ಡಾ ನಿವಾಸಿಯಾಗಿದ್ದು, ಇಂಜಿನಿಯರಿಂಗ್ ವೃತ್ತಿಯಲ್ಲಿದ್ದಾರೆ. ಈ ಹಿಂದೆ ಭುವನೇಶ್ವರ್ ಕುಮಾರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಪ್ರೇಯಸಿ ಜತೆಗೆ ಕುಳಿತಿರುವ ಫೋಟೋ ಹಾಕಿದ್ದರು. ಆ ನಂತರ ಭುವನೇಶ್ವರ್ ಮದುವೆ ಕುರಿತಂತೆ ಮಾತುಗಳು ಕೇಳಿಬಂದಿದ್ದವು.