ಮೈಸೂರು, ಫೆಬ್ರವರಿ 13 (www.justkannada.in): ಗೋಕುಲಂನಲ್ಲಿರುವ ಕ್ರೇಡೆಲ್ ಅಕಾಡೆಮಿ (ಮಾಂಟೆಸರಿ ಹೌಸ್ ಫಾರ್ ಚಿಲ್ಡ್ರನ್)ನಲ್ಲಿ ಇತ್ತೀಚಿಗೆ ‘ಕ್ರೇಡೆಲ್ ಫೆಸ್ಟ್’ ಒಪೆನ್ ಡೇ ಹಾಗೂ ಎಕ್ಸಿಬಿಷನ್ ಕಾರ್ಯಕ್ರಮ ನಡೆಯಿತು.

ಎರಡು ದಿನಗಳ ಕಾಲ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನೃತ್ಯ, ಸಂಗೀತ, ಫ್ಯಾನ್ಸಿ ಡ್ರೆಸ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಕ್ರೆಡೆಲ್ ಸೇರಿದಂತೆ ವಿವಿಧ ಶಾಲೆಗಳ ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು.

‘ಕ್ರೇಡೆಲ್ ಫೆಸ್ಟ್’ ಸಂಪೂರ್ಣ ಕಾರ್ಯಕ್ರಮವನ್ನು ಮಕ್ಕಳೇ ನಿರ್ವಹಿಸಿದ್ದು, ವಿಶೇಷವಾಗಿತ್ತು. ಮಕ್ಕಳು ತಯಾರಿಸಿದ ವಿಜ್ಞಾನ ಮಾದರಿಗಳು ಗಮನ ಸೆಳೆದವು. ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಯಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಫೆಸ್ಟ್ ನಲ್ಲಿ ಪಾಲ್ಗೊಂಡಿದ್ದ ಮಕ್ಕಳೆಲ್ಲ ತಮ್ಮಲ್ಲಿರುವ ಚಿತ್ರಕಲೆ, ಸಂಗೀತ, ನೃತ್ಯ ಸೇರಿದಂತೆ ವಿವಿಧ ಕಲೆಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಮಕ್ಕಳೊಂದಿಗೆ ಅವರ ಪಾಲಕರೂ ಪಾಲ್ಗೊಂಡು ಸಂಭ್ರಮಿಸಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಚಿಣ್ಣರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿತರಿಸಲಾಯಿತು. ಡಾ.ಸಾರಿಕಾ ಪ್ರಸಾದ್, ಚಂದ್ರಕಲಾ, ಚಂದನ, ಬಸಕೈ, ನಳಿನಿ ಬಸವಣ್ಣ, ವಸಂತಾ ಅವರು ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಕ್ರೇಡೆಲ್ ಡೈರೆಕ್ಟರ್ ಭಾವನಾ ಶ್ರೀಕಾಂತ್, ಹಿಮ ಬಿಂದು, ಉಷಾ, ಅಶ್ವಿನಿ ಇತರರು ಪಾಲ್ಗೊಂಡಿದ್ದರು.