ಮೈಸೂರಿನ ಕೋರ್ಟ್ ಇತಿಹಾಸದಲ್ಲೆ ಅಪರೂಪದ ಘಟನೆ : ಜಡ್ಜ್ ಮೆಂಟ್ ದಿನದಂದೇ ಎಸ್ಕೇಪ್ ಆಗ್ತಿದ್ದಾನೆ ಅತ್ಯಾಚಾರ ಆರೋಪಿ…

0
433
court history -Mysore -rape case- accused -escape-judgement

ಮೈಸೂರು,ಡಿ,7,2017(www.justkannada.in): ಜಡ್ಜ್ ಮೆಂಟ್ ನೀಡುವ ದಿನದಂದೇ ಅತ್ಯಾಚಾರ ಆರೋಪಿಯೋರ್ವ ಕೋರ್ಟ್ ಗೆ ಗೈರಾಗುತ್ತಿರುವ ವಿಚಿತ್ರ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಕೋರ್ಟ್ ಇತಿಹಾಸದಲ್ಲೆ ಅಪರೂಪದ ಘಟನೆ ನಡೆದಿದೆ. ಶ್ರೀರಾಮುಲು ಸ್ಥಾಪಿಸಿದ್ದ ಬಿ ಎಸ್ ಆರ್ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷನಾಗಿದ್ದ ಕೆ ಜೆ ಮಹೇಶ್ ಗೌಡನೇ ಜಡ್ಜ್ ಮೆಂಟ್ ದಿನದಂದೇ ಕೋರ್ಟ್ ಗೆ ಹಾಜರಾಗುತ್ತಿಲ್ಲ. ಮಹೇಶ್ ಗೌಡ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಈ ಸಂಬಂಧ ಮಹೇಶ್ ಗೌಡನನ್ನ ಬಂಧಿಸುವಂತೆ ನ್ಯಾಯಾಧೀಶರಾದ ವಿಜಯ್ ಕುಮಾರ್ ಪೌಲೆ ಅವರು ಪೊಲೀಸರಿಗೆ ಆದೇಶ ನೀಡಿದ್ದರು.

ಮಹೇಶ್ ಗೌಡ ಪೊಲೀಸರು ಹಾಗೂ ನ್ಯಾಯಾಲಯಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಿದ್ದು, ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ನಿಯಮವಿದ್ರು ಖ್ಯಾರೆ ಎನ್ನುತ್ತಿಲ್ಲ. ಆರೋಪಿ ವಿರುದ್ದ ಮೈಸೂರಿನ 6ನೇ ಎಡಿಜೆ ಕೋರ್ಟ್ ನಲ್ಲಿ ಶಿಕ್ಷೆ ಪ್ರಕಟಿಸಬೇಕು. ಆದರೆ ಆರೋಪಿ ಕೋರ್ಟ್ ಹಾಜರಾಗದ ಕಾರಣ ಮತ್ತೆ ಡಿಸೆಂಬರ್ 11 ಕ್ಕೆ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಕೋರ್ಟ್ ತಿಳಿಸಿದೆ.

key words: court history -Mysore -rape case- accused -escape-judgement