ಕಾರ್ನ್ ಅಂಡ್ ಚೀಸ್ ಬಾಲ್ ರೆಸಿಪಿ

0
703

ಬೇಕಾಗುವ ಪದಾರ್ಥಗಳು :
ಜೋಳ 1 ಕಪ್
ಪನೀರ್ 100 ಗ್ರಾಂ
ಚೀಸ್ 3/4 ಕಪ್
ಜೋಳದ ಹಿಟ್ಟು 2 ಚಮಚ
ಮೈದಾ 1/4 ಕಪ್
ರುಚಿಗೆ ತಕ್ಕ ಉಪ್ಪು
ಹಸಿ ಮೆಣಸಿನಕಾಯಿ 1
ಕೊತ್ತಂಬರಿ ಸೊಪ್ಪು 2 ಚಮಚ
ಅಡುಗೆ ಸೋಡಾ 1/2 ಚಮಚ
ಹಾಲು 1/4 ಕಪ್
ಬ್ರೆಡ್ ಚೂರು 1/4 ಕಪ್
ಡೀಪ್ ಫ್ರೈ ಮಾಡಲು ಎಣ್ಣೆ

ಮಾಡುವ ವಿಧಾನ:
* ಜೋಳವನ್ನು ಬೇಯಿಸಿ. ನಂತರ ನೀರನ್ನು ಬಸಿದು ತರಿತರಿಯಾಗಿ ರುಬ್ಬಿ.
* ಪನೀರ್ ಅನ್ನು ತರಿತರಿಯಾಗಿ ತುರಿಯಿರಿ. ಪನೀರ್ ಬದಲು ಆಲೂಗಡ್ಡೆಯನ್ನು ತುರಿದು ಹಾಕಬಹುದು.
* ಈಗ ಸ್ವಲ್ಪ ದೊಡ್ಡ ಬಟ್ಟಲಿನಲ್ಲಿ ರುಬ್ಬಿದ ಜೋಳ, ಪನೀರ್, ಚೀಸ್, ಜೋಳದ ಹಿಟ್ಟು, ಮೈದಾ, ರುಚಿಗೆ ತಕ್ಕ ಉಪ್ಪು, ಸಕ್ಕರೆ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ.
* ನಂತರ ಇವುಗಳಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿ. ನಂತರ 20 ನಿಮಿಷ ಫ್ರಿಜ್ ನಲ್ಲಿಡಿ.
* ಉಂಡೆಯನ್ನು ಹಾಲಿನಲ್ಲಿ ಅದ್ದಿ, ನಂತರ ಬ್ರೆಡ್ ಚೂರುನಲ್ಲಿ ಹೊರಳಾಡಿಸಿ ಮತ್ತೆ ಫ್ರಿಜ್ ನಲ್ಲಿ 15 ನಿಮಿಷ ಇಡಿ.
* ಈಗ ಉಂಡೆಗಳನ್ನು ಫ್ರಿಜ್ ನಿಂದ ತೆಗೆದು ರೂಮಿನ ಉಷ್ಣತೆಯಲ್ಲಿ ಇಡಿ.
* ನಂತರ ಡೀಪ್ ಫ್ರೈ ಮಾಡಲು ಪ್ಯಾನ್ ಗೆ ಎಣ್ಣೆ ಹಾಕಿ ಗ್ಯಾಸ್ ಮೇಲೆ ಇಡಿ. ಎಣ್ಣೆ ಕಾದಾಗ ಉಂಡೆಗಳನ್ನು ಹಾಕಿ, ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿದರೆ ಕಾರ್ನ್ ಅಂಡ್ ಚೀಸ್ ಬಾಲ್ ರೆಡಿ.
* ಕರಿದ ಉಂಡೆ ಬಿಸಿ-ಬಿಸಿ ಇರುವಾಗಲೇ ಟೊಮೆಟೊ ಕೆಚಪ್ ಜೊತೆ ಸವಿಯಿರಿ