ಬೆಂಗಳೂರು,ಏ,20,2017(www.justkannada.in):  ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆ ಮತ್ತೆ ಗರಿಗೆದರಿದ್ದು, ರಾಯಣ್ಣ ಬ್ರಿಗೇಡ್ ನ ಯುವ ಘಟಕದ ಪದಾಧಿಕಾರಿಗಳ ಪಟ್ಟಿಯನ್ನ ಬಿಡುಗಡೆ ಮಾಡಲಾಯಿತು.Congratulating –Sangulli - Rayanna Brigade list -office bearers -youth unit -released ...

ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯುವಘಟಕದ 20 ಮಂದಿ ಪದಾಧಿಕಾರಿಗಳ ಪಟ್ಟಿಯನ್ನ ಬಿಡುಗಡೆ ಮಾಡಲಾಯಿತು.ಯುವ ಘಟಕದ ರಾಜ್ಯಾಧ್ಯಕ್ಷರಾಗಿ ವೀರೇಶ್ ಉಂಡೋಡಿ ಹಾಗೂ ಕಾರ್ಯಾಧ್ಯಕ್ಷರಾಗಿ ಅನೇಕಲ್ ನ ಎಂ. ದೊಡ್ಡಯ್ಯ ಆಯ್ಕೆಯಾಗಿದ್ದಾರೆ,

70 ಸಾವಿರ ದಲಿತರು 70 ಸಾವಿರ ಲಿಂಗಾಯಿತರಿದ್ದರೂ ಅವರೇ ಗೆದ್ದರು; ಬಿಎಸ್ ವೈ ಗೆ ಪರೋಕ್ಷ ಟಾಂಗ್…

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನ ಕಾರ್ಯಾಧ್ಯಕ್ಷ ಮುಕುಡಪ್ಪ ಯುವಘಟಕದ ಪದಾಧಿಕಾರಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಮುಕುಡಪ್ಪ, ಈಶ್ವರಪ್ಪನವರ ಸಮ್ಮುಖದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಹೆಸರನ್ನು ಹೇಳದೆ ಪರೋಕ್ಷವಾಗಿ ಟಾಂಗ್ ನೀಡಿದರು. ನಂಜನಗೂಡಿನಲ್ಲಿ 70 ಸಾವಿರ ಲಿಂಗಾಯಿತರು ಹಾಗೂ 70 ಸಾವಿರ ದಲಿತರಿದ್ದಾರೆ. ಆದರೂ  ಅವರೇ ಗೆದ್ದರು ಎಂದರು.

Key words: Congratulating –Sangulli – Rayanna Brigade list -office bearers -youth unit -released …