ಸಿಎಂ ಆಪ್ತ ಕೆಂಪರಾಜು ಪುತ್ರನ ಗೂಂಡಾಗಿರಿ: ಕ್ಷುಲ್ಲಕ ಕಾರಣಕ್ಕೆ ಕೆಎಸ್ ಆರ್ ಟಿಸಿ ಬಸ್ ಚಾಲಕನ ಮೇಲೆ ಹಲ್ಲೆ…

0
466
CM siddaramaiah- close – Kamparaju-son- assult-bus driver

ಚಿಕ್ಕಮಗಳೂರು,ಡಿ,7,2017(www.justkannada.in): ಚಿಕ್ಕಮಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯನವರ ಆಪ್ತ ಕೆಂಪರಾಜು  ಅವರ ಪುತ್ರ ಭರತ ಮತ್ತು ಅವರ ಗ್ಯಾಂಗ್ ಗೂಂಡಾಗಿರಿ ಪ್ರದರ್ಶಿಸಿದ್ದು, ಕೆಎಸ್ ಆರ್ ಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ನಗರದ ಎನ್ಎಂಸಿ ವೃತ್ತದ ಬಳಿ ಕೆಎಸ್ ಆರ್ ಟಿಸಿ ಬಸ್ ಚಾಲಕನ ಮೇಲೆ ಭರತ್ ಮತ್ತು ಅವನ ಗ್ಯಾಂಗ್ ಹಲ್ಲೆ ನಡೆಸಿದ್ದಾರೆ. ನಿನ್ನೆ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುವಾಗ ಸರ್ಕಾರಿ ಬಸ್ ಅಡ್ಡ ಬಂದಿದೆ. ಇದರಿಂದ ಕೋಪಗೊಂಡ ಭರತ್  ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ತೋರಿಸಿದ್ದಾರೆ. ಬಸ್ ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನು ಈ ಬಗ್ಗೆ ಚಾಲಕ ಪೊಲೀಸರಿಗೆ ದೂರು ನೀಡಲು ಹೋದರೇ ದೂರು ಸ್ವೀಕರಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಭಾವಿ ಸಚಿವರ ಒತ್ತಡದಿಂದ ದೂರು ಸ್ವೀಕರಿಸಲು ಪೊಲೀಸರು  ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ಕೆಂಪರಾಜು ಕಡೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

Key words: CM siddaramaiah- close – Kamparaju-son- assult-bus driver