ನಾನು ಸಿಎಂ ಅಭ್ಯರ್ಥಿ ಆಕಾಂಕ್ಷಿ ಅಲ್ಲ;  ಸಿಎಂ ಅಭ್ಯರ್ಥಿ ಜತೆ ಪೈಪೋಟಿ ನಡೆಸಲ್ಲ- ರಾಯಚೂರಿನಲ್ಲಿ ಸಚಿವ ಡಿ.ಕೆ ಶಿವಕುಮಾರ್ ಸ್ಪಷ್ಟನೆ….

0
338
CM candidate- next election -CM Siddaramaiah- Minister DK Shivakumar -Raichur.

ರಾಯಚೂರು,ಆ,12,2017(www.justkannada.in): ನಾನು ಸಿಎಂ ಅಭ್ಯರ್ಥಿ ಆಕಾಂಕ್ಷಿ ಅಲ್ಲ. ಸಿಎಂ ಅಭ್ಯರ್ಥಿ ಜೊತೆ ನಾನು ಪೈಪೋಟಿ ನಡೆಸಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ  ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿದರು.CM candidate- next election -CM Siddaramaiah- Minister DK Shivakumar -Raichur.

ರಾಯಚೂರಿನಲ್ಲಿ ಇಂದು ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ರಾಜ್ಯದಲ್ಲಿ ಮತ್ತೆ ಬರಗಾಲ ಆವರಿಸಿದೆ. ತುಂಗಭದ್ರ ಸೇರಿ ಹಲವು ನದಿಗಳ ಒಳ ಹರಿವು ಕಡಿಮೆಯಾಗಿದೆ.  ಬಳ್ಳಾರಿಯಲ್ಲಿ ಸ್ವಲ್ಪ ವಿದ್ಯುತ್ ಸಮಸ್ಯೆ ಆಗಬಹುದು. ವಿದ್ಯುತ್ ಸಮಸ್ಯೆ ನಿವಾರಣೆಗಾಗಿ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಸಲು  ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಬಣ್ಣ ಹಾಕಿ ಸಿನಿಮಾ ಮಾಡಿದ್ದಾರೆ. ಈಗ ಬಣ್ಣ ಹಾಕದೆ ರಾಜಕಾರಣ ಮಾಡಲಿ- ಉಪ್ಪಿಗೆ ಶುಭಕೋರಿದ ಸಚಿವ ಡಿಕೆಶಿ…

ಇನ್ನು ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ರಾಜಕೀಯಕ್ಕೆ ಎಂಟ್ರಿಕೊಡಲಿದ್ದು ಇಂದು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ನಿರ್ಧಾರ ಪ್ರಕಟಿಸಲಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಡಿ.ಕೆ ಶಿವಕುಮಾರ್,  ಉಪೇಂದ್ರರಂತಹ ಯುವಕರು ರಾಜಕೀಯಕ್ಕೆ ಬರುವುದು ಒಳ್ಳೆಯದು. ಬಣ್ಣ ಹಚ್ಚಿ ಅವರು ಸಿನಿಮಾ ಮಾಡುತ್ತಿದ್ದರು. ಈಗ ಬಣ್ಣ ಹಚ್ಚದೆ ರಾಜಕೀಯ ಮಾಡಲಿ. ಅಲ್ ದಿ ಬೆಸ್ಟ್ ಎಂದು ಉಪೇಂದ್ರ ಅವರಿಗೆ ಶುಭ ಕೋರಿದರು.

Key words: CM candidate- next election -CM Siddaramaiah- Minister DK Shivakumar -Raichur.