ಮೈಸೂರು,ಜೂ,19,2017(www.justkannada.in): ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮ್ಯಾನ್ ವೋಲ್ ಶುಚಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ  ಪಿಡಿಓ ಆನಂದ್ ರನ್ನ ಪೊಲೀಸರು ಬಂಧಿಸಿದ್ದಾರೆ.cleaned – manhole-civic worker-PDO- arrest

ಪೌರಕಾರ್ಮಿಕ ಗಣೇಶ್  ಎಂಬವರನ್ನು ಜೂ.7ರಂದು ಮ್ಯಾನ್ ಹೋಲ್ ಗೆ ಇಳಿಸಲಾಗಿತ್ತು  ಚಾಮುಂಡಿಬೆಟ್ಟದ ಗ್ರಾಮ ಪಂಚಾಯತ್ ಪಿಡಿಓ ಆನಂದ್ ಬಲವಂತವಾಗಿ, ಬೆದರಿಸುವ ಮೂಲಕ ಸುರಕ್ಷತಾ ಕ್ರಮ ಕೈಗೊಳ್ಳದೇ ಮ್ಯಾನ್ ಹೋಲ್ ಗಿಳಿಸಿದ್ದರು. ಘಟನೆಯ ಮರುದಿನವೇ ಅವರನ್ನು ಅಮಾನತುಗೊಳಿಸಿ ಬಂಧನಕ್ಕೆ ಆದೇಶ ಹೊರಡಿಸಲಾಗಿತ್ತು.

ಆದರೆ ಬಂಧನದ ವೇಳೆ ಆನಂದ್ ತಪ್ಪಿಸಿಕೊಂಡಿದ್ದ. ಆತನ ಶೋಧಕ್ಕೆ ಕೆ.ಆರ್.ಠಾಣೆಯ ಇನ್ಸಪೆಕ್ಟರ್ ಪ್ರಕಾಶ್ ತಂಡ ರಚಿಸಿದ್ದರು. ಇದೀಗ ಪಿಡಿಓ ಬಂಧಿಸಿಸುವಲ್ಲಿ ಕೆ.ಆರ್.ಪೊಲೀಸರು ಯಶಸ್ವಿಯಾಗಿದ್ದಾರೆ.

Key words: cleaned – manhole-civic worker-PDO- arrest.