ಶಾಲಾ ಮಕ್ಕಳೆದುರೇ ಶಿಕ್ಷಕರು, ಮತ್ತು ಅಡುಗೆ ಸಹಾಯಕಿಯರ ನಡುವೆ ಹೊಡೆದಾಟ;ಶಾಲೆಯ ಶಿಕ್ಷಕರ ವರ್ಗಾವಣೆಗೆ ಗ್ರಾಮಸ್ಥರ ಪ್ರತಿಭಟನೆ…..

0
541
Clashes -between - helpers -school teachers.....

ತುಮಕೂರು,ಮಾ,20,2017(www.justkannada.in):  ಅಡುಗೆ ಮಾಡುವ ವಿಚಾರಕ್ಕೆ ಶಿಕ್ಷಕರು ಹಾಗೂ ಅಡುಗೆ ಸಹಾಯಕಿಯ ನಡುವೆ ವೈಮನಸ್ಸು ಉಂಟಾಗಿ ಶಾಲಾ ಮಕ್ಕಳೆದುರೇ ಹೊಡೆದಾಟಡಿಕೊಂಡ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿಯಲ್ಲಿ ಈ ಘಟನೆ ನಡೆದಿರುವುದು. ಶಿಕ್ಷಕರ ಮತ್ತು ಅಡುಗೆ ಸಹಾಯಕಿಯ ನಡುವೆ  ವೈಮನಸ್ಸು ಉಂಟಾಗಿದ್ದು,  ರವಿ ಮಲ್ಲೇಶ್, ಮೀನಾಕ್ಷಿ ಇಬ್ಬರು ಶಿಕ್ಷಕರು ಹಾಗೂ ಅಡುಗೆ ಸಹಾಯಕಿ ಜಯಮ್ಮ ನಡುವೆ ಜಗಳವಾಗಿದೆ. ಅಡುಗೆ‌‌ ಮಾಡುವ ವಿಚಾರಕ್ಕೆ ಶಿಕ್ಷಕರ ನಡುವೆ  ಅಡುಗೆ ಸಹಾಯಕಿ ಮಾತಿನ ಚಕಮಕಿ ನಡೆಸಿದ್ದು, ಶಾಲೆಯಲ್ಲಿ ಮಕ್ಕಳೆದುರೆ ಇವರು ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಶಾಲೆಯ ಶಿಕ್ಷಕರ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೊರಟಗೆರೆ ಬಿಇಓ ಮಹೇಶ್ ಭೇಟಿ ವಿಚಾರಣೆ ನಡೆಸಿದರು.

Key words: Clashes -between – helpers -school teachers…..