ನಗರಕ್ಕೆ ನಿರಂತರ ವಿದ್ಯುತ್ ಸಾಧ್ಯವಿಲ್ಲ- ರಾಯಚೂರಿನ ಆರ್ಟಿಪಿಎಸ್ ಮತ್ತು ವೈಟಿಪಿಎಸ್ ಗೆ ಭೇಟಿ ನೀಡಿ ಸಚಿವ ಡಿ.ಕೆ ಶಿವಕುಮಾರ್ ಹೇಳಿಕೆ..

0
417
city-does-not-have-constant-power-minister-dk-shivakumar

ರಾಯಚೂರು,ಆ,11,2017(www.justkannada.in): ರಾಯಚೂರು ನಗರಕ್ಕೆ ನಿರಂತರ ವಿದ್ಯುತ್ ಬೇಡಿಕೆ ಸಲ್ಲಿಸಿದ್ದು, ನಿರಂತರ ನೀಡಲು ಸಾಧ್ಯವಿಲ್ಲ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದರು.city-does-not-have-constant-power-minister-dk-shivakumar

ನಗರದಲ್ಲಿ ಹಮ್ಮಿಕೊಂಡ ಕಾಂಗ್ರೆಸ್  ಸಮಾವೇಶಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಆಗಮನ ಹಿನ್ನಲೆ ಆರ್ಟಿಪಿಎಸ್ ಮತ್ತು ವೈಟಿಪಿಎಸ್ ಗೆ ಸಚಿವ ಡಿ.ಕೆ ಶಿವಕುಮಾರ್  ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಗರಕ್ಕೆ ಕಳೆದ ೫ ವರ್ಷಗಳ ಹಿಂದೆನಿಂದಲೂ ನಗರಕ್ಕೆ ನಿರಂತರ ವಿದ್ಯುತ್ ಬೇಡಿಕೆ ಮನವಿ ಸಲ್ಲಿಸಿದ್ದರು. ನಿರಂತರ ವಿದ್ಯುತ್ ನ್ನು ನೀಡಲು ಸಾದ್ಯವಿಲ್ಲ ಎಂದರು.

ಆರ್ಟಿಪಿಎಸ್ ವೈಟಿಪಿಎಸ್ ಎರಡು ಘಟಕಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಬಳ್ಳಾರಿ ವಿದ್ಯುತ್ ಘಟಕಕ್ಕೆ ನಾರಾಯಣ ಪೂರ್ ಜಲಾಶಯ ದಿಂದ 1 ಸಾವಿರ ಕೋಟಿ ವೆಚ್ಚದಲ್ಲಿ 200 ಕಿಮೀ ವರೆಗೆ ಸುರಂಗದಲ್ಲಿ ಪೈಪ್ ಲೈನ್ ಮೂಲಕ ನೀರು ಸರಬರಾಜು ಮಾಡಲು ಪ್ರಕ್ರಿಯೆ ಪ್ರಾರಂಭವಾಗಿದೆ.ಆರ್ಟಿಪಿಎಸ್ ಕೆಲ ಘಟಕಗಳನ್ನ ಪುನಶ್ಚೇತನಗೊಳಿಸಲಾಗುವುದು. 2018ರಲ್ಲಿ ಯಲಹಂಕ ಬಳಿ ಗ್ಯಾಸ್ ವಿದ್ಯುತ್ ಉತ್ಪಾದನೆ ಮಾಡಲು ಯೊಜನೆ ರೂಪಿಸಿದೆ ಎಂದು ಮಾಹಿತಿ ನೀಡಿದರು

ಎಸ್.ಆರ್ ಹಿರೆಮಠರ ಆರೋಪಕ್ಕೆ ಸ್ವಾಗತಿಸಿದ ಡಿ.ಕೆ ಶಿವಕುಮಾರ್, ಗುಜರಾತ್ ನ ಶಾಸಕರು ನನ್ನನ್ನು ಊಟಕ್ಕೆ ಆಹ್ವಾನ ನೀಡಿದ್ದರು. ಅದಕ್ಕೆ ಹೋಗಿದ್ದೆ ಎಂದು ತಿಳಿಸಿದರು.

Key words:  city -does not have-constant- power- Minister DK Shivakumar