ಅ.22ರಂದು ಚಿರು-ಮೇಘನಾ ನಿಶ್ಚಿತಾರ್ಥ, ಡಿ.6ಕ್ಕೆ ಮದುವೆ

0
981

ಬೆಂಗಳೂರು, ಅಕ್ಟೋಬರ್ 11 (www.justkannada.in): ನಟ ಚಿರಂಜೀವಿ ಸರ್ಜಾ ಅವರು ನಟಿ ಮೇಘನಾ ರಾಜ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಅ. 22ರಂದು ಚಿರು ಮತ್ತು ಮೇಘನಾ ರಾಜ್‌ ಜೋಡಿಯ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಡಿ. 6ಕ್ಕೆ ಮದುವೆ ದಿನಾಂಕ ನಿಗದಿಪಡಿಸಲಾಗಿದೆ.

ಹಿರಿಯ ನಿರ್ಮಾಪಕ ದ್ವಾರಕೀಶ್ ನಿರ್ಮಾಣದ ‘ಆಟಗಾರ’ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಒಟ್ಟಿಗೆ ಅಭಿನಯಿಸಿದ್ದರು. ಬಹುಕಾಲ ಸ್ನೇಹಿತರಾಗಿದ್ದ ಈ ಜೋಡಿ ಇದೀಗ ಮದುವೆಯಾಗಲು ನಿರ್ಧರಿಸಿದ್ದಾರೆ.