ಅಂದು ಚೆನ್ನೈನಲ್ಲಿ ಬೆಗ್ಗರ್ ಬಾಯ್ ಆಗಿದ್ದಾತ ಇಂದು ಕೇಂಬ್ರಿಜ್ ನಲ್ಲಿ ಆಟೋಮೊಬೈಲ್ ಎಂಜಿನಿಯರ್….!

0
193
chennai-begger-boy-engineering-Cambridge University-Jayavel

chennai-begger-boy-engineering-Cambridge University-Jayavel

ಮೈಸೂರು, ಏ.11, 2017 : (www.justkannada.in news ) ಕೆಲವು ಬದುಕುಗಳೇ ಹೀಗೆ .. ಯಾವಾಗ ಯಾವ ಕಡೆಗೆ ಪವಾಡ ಸದೃಶ ರೀತಿಯಲ್ಲಿ ಹೊರಳುತ್ತದೆ ಹೇಳಲಾಗದು. ಪರಮ ನಿಕೃಷ್ಟ ಸ್ಥಿತಿಯಲ್ಲಿರುವವರಿಗೂ ಸ್ಫೂರ್ತಿಯ ಚಿಲುಮೆಯಾಗುವ, ಭರವಸೆಯ ಬೆಳಕಾಗುವ ಜೀವನದ ಕ್ಷಣಗಳು, ಅಚ್ಚರಿಯ ಜೊತೆಗೆ ಆತ್ಮವಿಶ್ವಾಸ ಮೂಡಿಸುತ್ತವೆ.

ಚೆನ್ನೈನ ಮೂಲೆಯೊಂದರಲ್ಲಿ ಭಿಕ್ಷುಕರ ಮನೆಯ ಹುಡುಗ ಈಗ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ವಾಹನ ಎಂಜಿನಿಯರಿಂಗ್ನಲ್ಲಿ ವ್ಯಾಸಂಗ ಮಾಡಲು ಹೊರಟಿದ್ದಾನೆ ಎಂದರೆ ಬದುಕೆಂಬ ಅವಧಿಯ ಆಯಾಮಗಳ ಬಗ್ಗೆ ಏನು ಹೇಳಬಹುದು…?

1980ರಲ್ಲಿ ಬೆಳೆ ವೈಫಲ್ಯದಿಂದ ಬೇಸರಗೊಂಡಿದ್ದ ಜಯವೇಲ್ ಅವರ ಕುಟುಂಬ ನೆಲ್ಲೂರಿನಿಂದ ಚೆನ್ನೈಗೆ ಬಂದಿತ್ತು. ನಗರದ ರಸ್ತೆಗಳಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿತ್ತು. ರಸ್ತೆ ಬದಿಯ ಫುಟ್ಪಾತ್ನಲ್ಲಿ ಮಲಗುತ್ತಿದ್ದ ಕುಟುಂಬಕ್ಕೆ ಮಳೆ ಬಂದರೆ ನಿದ್ದೆ ಇಲ್ಲದ ದಿನಗಳು ಅದೆಷ್ಟೋ… ಪೋಲೀಸರು ಬಂದು ಒಡಿಸಿ ಬಿಟ್ಟರೂ ಇದೇ ಕಥೆ..

ಅಪ್ಪ ಕಾಲವಾದ ನಂತರ ಅಮ್ಮ ಬಾಟ್ಲಿಯ ದಾಸಿಯಾಗಿಹೋದಳು. ಆತನ ಆದಾಯದಲ್ಲಿ ಬಹುತೇಕ ಭಾಗ ಹೆಂಡಕ್ಕೇ ವೆಚ್ಚವಾಗುತ್ತಿತ್ತು. ಜಯವೇಲ್ ಇಂಥ ದಾರುಣ ದಿನಗಳಲ್ಲೇ ಉಮಾ ಮುತ್ತುರಾಮನ್ರನ್ನು ಭೇಟಿಯಾಗಿದ್ದ.

ಉಮಾ ಅವರು ತಮ್ಮ ಪತಿ ಮುತ್ತುರಾಮನ್ ಅವರೊಂದಿಗೆ ಜಯವೇಲ್ಗೆ ಸಹಾಯ ಮಾಡಲು ಮುಂದಾದರು. ಅವರು ಪೇವ್ಮೆಂಟ್ ಫ್ಲವರ್ ಎಂಬ ವಿಡಿಯೋ ಚಿತ್ರವನ್ನು ಜಯವೇಲ್ ಕುಟುಂಬದ ಮೇಲೆ ಚಿತ್ರೀಕರಿಸಲು ಅವರು ಮುಂದಾಗಿದ್ದರು. ಜಯವೇಲ್ ಜೊತೆಯವರಿಗೆ ಇದು ಇಷ್ಟವಾಗಲಿಲ್ಲ. ಉಮಾ ಮತ್ತು ಅವರ ಪತಿಯ ಮೇಲೆ ಹಲ್ಲೆ ಮಾಡಲೂ ಮುಂದಾಗಿದ್ದರು. ತಮ್ಮ ಹೆಸರನ್ನು ಉಮಾ ಅವರು ಸರಕಾರಿ ನಿಧಿ ಪಡೆಯಲು ಬಳಸುತ್ತಾರೆ ಎಂದುಕೊಂಡಿದ್ದರು.

ಆದರೆ ಉಮಾ ಅವರ ಬಗ್ಗೆ ಅರಿತ ನಂತರ ಈ ಜನರು ಬದಲಾಗಿದ್ದರು. ಉಮಾ ಬಗ್ಗೆ ಅವರ ಧೋರಣೆ ಮೃದುವಾಗಿತ್ತು. ಈ ಮೂಲಕವೇ ಜಯವೇಲ್ಗೆ 1999ರಲ್ಲಿ ಸುಯಮ್ ಸಹಾಯಾರ್ಥ ಟ್ರಸ್ಟ್ ಮೂಲಕ ಸೂಕ್ತ ಶಿಕ್ಷಣದ ಯೋಗ ಲಭಿಸಿತ್ತು.
ಓದಿನಲ್ಲಿ ಅಪಾರ ಹಸಿವು ಹೊಂದಿದ್ದ ಜಯವೇಲ್ 12ನೇ ತರಗತಿ ಪರೀಕ್ಷೆಯಲ್ಲಿ ಉತ್ಕೃಷ್ಟ ಅಂಕ ಸಂಪಾದಿಸಿದ್ದಲ್ಲದೇ, ಕೇಂಬ್ರಿಜ್ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದ. ಅವನಿಗೆ ವೇಲ್ಸ್ನ ಗ್ಲೆಂಡ್ವರ್ ವಿಶ್ವವಿದ್ಯಾಲಯದಲ್ಲಿ ಕಾರು ಪ್ರದರ್ಶನ ವಿಸ್ತರಿಸುವ ತಂತ್ರಜ್ಞಾನದ ಎಂಜಿನಿಯರಿಂಗ್ ಅಧ್ಯಯನದ ಅವಕಾಶ ಲಭಿಸಿತ್ತು.

ಜಯವೇಲ್ಗೆ ಉನ್ನತ ಶಿಕ್ಷಣ ಕೊನೆಯಲ್ಲ. ಅವನಿಗೆ ಇನ್ನೂ ಬಹಳ ದೊಡ್ಡ ಕನಸುಗಳಿವೆ. ತನ್ನ ಬದುಕು ಬದಲಿಸಿದ ಸರಕಾರೇತರ ಸಂಸ್ಥೆಗೆ ಗೌರವ ಸಲ್ಲಿಸುವಂತೆ ಆತನೂ ಒಂದು NGO ತೆರೆಯಲು ಯೋಜಿಸಿದ್ದಾನೆ. ತನ್ನಂತೆ ಇನ್ನೂ ಅನೇಕ ರಸ್ತೆ ಬದಿಯ ಮಕ್ಕಳ ಜೀವನ ಪರಿವರ್ತಿಸುವ ಕನಸು ಕಾಣುತ್ತಿದ್ದಾನೆ.
ಆತನ ಕನಸು ನನಸಾಗಲಿ, ಹಲವರ ಬದುಕು ಹಸನಾಗಲಿ…

ಕೃಪೆ : ಇಂಡಿಯಾ ಟುಡೆ

key words : chennai-begger-boy-engineering-Cambridge University-Jayavel

ENGLISH SUMMARY

Jayavel has become the talk of the town among the street dwellers of Chennai. While his family begs for a living, the 22-year-old has got a chance to study advanced automobile engineering at Cambridge University.
After crop failure in the 1980s, Jayavel’s farming family shifted from Nellore to Chennai in search of a living. Eventually, the family started begging in the streets of the burgeoning city. “We used to sleep on the pavement. If it would rain, we would try to find other shelter in any nearby shop until the cops came and chased us out of there,” Jayavel told India Today in an interview.