ಹಣ ಹೊಂದಿಸಲು ವಿಫಲ: ಚಂದ್ರಯಾನದ ಆಸೆ ಕೈಬಿಟ್ಟ ‘ಟೀಮ್ ಇಂಡಸ್’

0
359

ನವದೆಹಲಿ ಜನವರಿ 11 (www.justkannada.in): ಕಳೆದ ವರ್ಷ ಡಿ.31ರಂದು ಚಂದ್ರಗ್ರಹ ತಲುಪುವ ಗುರಿ ಹೊಂದಿದ್ದ ‘ಟೀಮ್ ಇಂಡಸ್’ ಎಂಬ ಖಾಸಗಿ ಬಾಹ್ಯಾಕಾಶ ಕಂಪನಿ ತನ್ನ ಯೋಜನೆಯನ್ನು ಕೈಬಿಟ್ಟಿದೆ.

ಗೂಗಲ್ ಕಂಪನಿಯು ಚಂದ್ರಯಾನ ಸಂಬಂಧ ಸ್ಪರ್ಧೆ ಆಯೋಜಿಸಿತ್ತು. ಇದರಲ್ಲಿ ವಿಶ್ವದ 5 ತಂಡಗಳು ಪಾಲ್ಗೊಳ್ಳಬೇಕಿತ್ತು. 35ದಶಲಕ್ಷ ಡಾಲರ್ ಬಹುಮಾನ ಹಣ ಕೂಡ ಘೋಷಿಸಲಾಗಿದೆ. ಆದರೆ ಭಾರತದ ‘ಟೀಮ್ ಇಂಡಸ್’ ಈಗ ಸ್ಪರ್ಧೆಯಿಂದ ಹಿಂದೆ ಸರಿದಿದೆ.

ಸ್ಪರ್ಧೆಗೆ ಬೇಕಾದ ಹಣ ಹೊಂದಿಸಲು ವಿಫಲವಾದ ಕಾರಣ ಟೀಮ್ ಇಂಡಸ್ ಸ್ಪರ್ಧೆಯಿಂದ ಹಿಂದೆ ಸರಿದಿದೆ ಎಂದು ಮೂಲಗಳು ಹೇಳಿವೆ. ಚಂದ್ರನ ಮೇಲಿಟ್ಟ ಮೊದಲ ಖಾಸಗಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಟೀಮ್ ಇಂಡಸ್ ಇಚ್ಛಿಸಿತ್ತು.