ಲಂಡನ್,ಜೂ,14,2017(www.justkannada.in): ಐಸಿಸಿ  ಚಾಂಪಿಯನ್ಸ್ ಟ್ರೋಫಿಯ 2ನೇ ಸೆಮಿಫೈನಲ್ ನಲ್ಲಿ ಭಾರತ ಮತ್ತು ಬಾಂಗ್ಲಾ  ಹಣಾಹಣಿ ನಡೆಸುತ್ತಿದ್ದು, ಟಾಸ್ ಗೆದ್ದ ಭಾರತ ಫಿಲ್ಡಿಂಗ್ ಆಯ್ದುಕೊಂಡಿದೆ.  ಈ ಮೂಲಕ ಎದುರಾಳಿ ಬಾಂಗ್ಲಾ ತಂಡವನ್ನ ಬ್ಯಾಟಿಂಗ್  ಇಳಿಸಿದೆ. Champions Trophy- India -won toss - elected - field.

ಲಂಡನ್ ನ ಎಜ್‌ಬಾಸ್ಟನ್‌ ಮೈದಾನದಲ್ಲಿ  ಪಂದ್ಯ ನಡೆಯಲಿದ್ದು, ಭಾರತೀಯ ಕಾಲಮಾನದ ಪ್ರಕಾರ 3 ಗಂಟೆಗೆ ಪಂದ್ಯ ಪ್ರಾರಂಭವಾಗಲಿದೆ.

ಇನ್ನು ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಗೆಲುವು  ಸಾಧಿಸಿ ಫೈನಲ್‌  ನಲ್ಲಿ ಪಾಕ್  ಮಣಿಸುವ ಮೂಲಕ ಮತ್ತೆ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿಯಲು ಸಜ್ಜಾಗಿದೆ. ಆದರೆ ಬಾಂಗ್ಲಾ ವಿರುದ್ದ ಗೆಲುವು ಸಾಧಿಸುವುದು ಕೊಹ್ಲಿ ಪಡೆಗೆ ಅಷ್ಟೇನು ಸುಲಭವಲ್ಲ. ಬಲಿಷ್ಟ ತಂಡಗಳಿಗೆ ಶಾಕ್ ನೀಡುವ ಬಾಂಗ್ಲಾ ಈಗಾಗಲೇ ನ್ಯೂಜಿಲ್ಯಾಂಡ್ ಪ್ರಬಲ ತಂಡವನ್ನ ಸೋಲಿಸಿ ಸೆಮಿ ಫೈನಲ್ ಪ್ರವೇಶಿಸಿದೆ. ಇಂದು ಸಹ ಬಾಂಗ್ಲ ಇಂಡಿಯಾ ವಿರುದ್ದ ಗೆಲುವು ಸಾಧಿಸುವ ವಿಶ್ವಾಸವಿದೆ.

ಸಂಬಾವ್ಯ ತಂಡ….

ಭಾರತ:  ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ(ನಾ), ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ದೋನಿ, ಕೇದಾರ್ ಜಾದವ್, ಹಾರ್ಧಿಕ್ ಪಾಂಡ್ಯ,ರವೀಂದ್ರ ಜಡೆಜಾ, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬೂಮ್ರಾ.

ಬಾಂಗ್ಲಾದೇಶ: ತಮಿಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಮಹಮ್ಮದುಲ್ಲಾ, ಸಬ್ಬಿರ್  ರೆಹಮನ್, ಮುಸ್ತಿಫರ್ ರಹೀಮ್, ಶಕೀಬ್ ಅಲ್ ಹಸನ್, ಮಿಸೆದ್ದಕ್ ಹಸಿನ್,ಮೊಶ್ರೆಫೆ ಮೊರ್ತಾಜಾ(ನಾ), ತಾಸ್ಕಿನ್  ಅಹಮದ್,ರುಬೆಲ್ ಹಸಿನ್, ಮುಸ್ತಫರ್  ರೆಹಮನ್.

Key words; Champions Trophy- India -won toss – elected – field.