ಚಾಂಪಿಯನ್ಸ್ ಟ್ರೋಫಿ ನಾಳಿನ ಫೈನಲ್ ನಲ್ಲಿ ಇಂಡೋ – ಪಾಕ್ ಸೆಣಸಾಟ: ಭಾರತ ಗೆಲ್ಲುವಂತೆ ಮೈಸೂರಿನಲ್ಲಿ ಕ್ರಿಕೆಟ್ ಪ್ರೇಮಿಗಳಿಂದ ಪೂಜೆ….

0
2477
champions-trophy-final-india-won-cricket-lovers

ಮೈಸೂರು,ಜೂ,17,2017(www.justkannada.in):  ಚಾಂಪಿಯನ್ಸ್ ಟ್ರೋಫಿ ಅಂತಿಮ ಹಂತ ತಲುಪಿದ್ದು, ಈಗಾಗಲೇ ಫೈನಲ್ ಪ್ರವೇಶಿಸಿರುವ ಭಾರತ ಮತ್ತು ಸಾಂಪ್ರದಾಯಕ ಎದುರಾಳಿ ಪಾಕ್  ನಾಳೆ ಸೆಣಸಾಟ ನಡೆಸಲಿವೆ.champions-trophy-final-india-won-cricket-lovers

ಈ ಹಿನ್ನೆಲೆ ನಾಳಿನ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನ ಬಗ್ಗು ಬಡಿದು ಚಾಂಪಿಯನ್ಸ್ ಟ್ರೋಫಿ ಮುಡಿಗೇರಿ ಸಿಕೊಳ್ಳಲಿ ಎಂದು ಶುಭ ಹಾರೈಸಿ  ಮೈಸೂರಿನಲ್ಲಿ ಕ್ರಿಕೆಟ್ ಪ್ರೇಮಿಗಳು ಪೂಜೆ ಸಲ್ಲಿಸಿದ್ದಾರೆ. ನಗರದ ಗಣಪತಿ ಹಾಗೂ ಮೃತ್ಯುಂಜಯ ಸ್ವಾಮಿ‌ದೇಗುಲದಲ್ಲಿ  ಕ್ರಿಕೆಟ್ ಅಭಿಮಾನಿಗಳು ಪೂಜೆ ಹೋಮ ನಡೆಸಿ ಭಾರತದ ಪರ ಜಯಘೋಷಣೆ ಕೂಗಿದರು.

ಮೊದಲ ಸೆಮಿಫೈನಲ್ ನಲ್ಲಿ ಪಾಕಿಸ್ತಾನ ಇಂಗ್ಲೇಂಡ್ ತಂಡವನ್ನು ಮಣಿಸಿ ಫೈನಲ್ ಗೆ ಪ್ರವೇಶಿಸಿದರೇ 2ನೇ ಸೆಮಿಫೈನಲ್ ನಲ್ಲಿ ಭಾರತ ಬಾಂಗ್ಲಾವನ್ನು ಸೋಲಿಸಿ ಫೈನಲ್ ತಲುಪಿದೆ. ಇನ್ನು ನಾಳೆ ನಡೆಯುವ ಪಂದ್ಯ ರೋಚಕವಾಗಿದ್ದು, ಭಾರತ ಟ್ರೋಫಿ ಗೆಲ್ಲುವ ಫೆವರೇಟ್ ಆಗಿದೆ.

Key words: Champions Trophy –final- India- Won – cricket lovers