ಲಂಡನ್,ಜೂ,18.2017(www.justkannada.in):  ಐಸಿಸಿ ಚಾಂಪಿಯನ್ಸ್ ಟ್ರೋಫಿ ಅಂತಿಮ ಹಂತಕ್ಕೆ ತಲುಪಿದ್ದು, ಫೈನಲ್ ಗೆ ಲಗ್ಗೆ ಇಟ್ಟಿರುವ  ಭಾರತ ಹಾಗೂ ಪಾಕ್ ಇಂದು ಸೆಣೆಸಾಡಲಿವೆ. Champions Trophy- Countdown -Indo-Pak- War -Today's Final

ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.  ಲಿಂಗ್ ಹಂತದಲ್ಲಿ ಒಂದು ಸೋಲನ್ನು ಕಂಡು ಸೆಮಿಫೈನಲ್ ನಲ್ಲಿ ಬಾಂಗ್ಲಾವನ್ನು ಬಗ್ಗು ಬಡಿದಿರುವ ಕೊಹ್ಲಿ ಪಡೆ ಇಂದು ಫೈನಲ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್  ಗೆ ಮಣ್ಣು ಮುಕ್ಕಿಸಿ ಚಾಂಪಿಯನ್ಸ್ ಪಟ್ಟಕ್ಕೇರಲು ಸಜ್ಜಾಗಿದೆ.

ಈ ಮಧ್ಯೆ ಸರಣಿಯುದ್ದಕ್ಕೂ ಅತ್ತ್ಯುತ್ತಮ  ಪ್ರದರ್ಶನ ನೀಡಿ ಸೆಮಿಫೈನಲ್ ನಲ್ಲಿ ಬಲಿಷ್ಟ ಇಂಗ್ಲೇಂಡ್ ತಂಡವನ್ನು ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟಿರುವ ಪಾಕ್  ಸಹ ಫೈನಲ್ ನಲ್ಲಿ ಭಾರತವನ್ನು  ಸೋಲಿಸಿ ಚಾಂಪಿಯನ್ಸ್ ಟ್ರೋಫಿ ತಮ್ಮದಾಗಿಸಿಕೊಳ್ಳಲು  ಕಾತರದಿಂದ ಕಾಯುತ್ತಿದೆ.

ಆದರೆ ಬಲಿಷ್ಟ ಬ್ಯಾಟಿಂಗ್ ಲೈನ್ ಹಾಗೂ ಉತ್ತಮ ಬೌಲಿಂಗ್ ಹೊಂದಿರುವ ಭಾರತವನ್ನು ಬಗ್ಗು ಬಡಿಯುವುದು ಪಾಕ್ ಅಷ್ಟು ಸುಲಭವಲ್ಲ. ಅದರಂತೆಯೇ ಪಾಕ್ ಸಹ  ಬ್ಯಾಟಿಂಗ್ ಬೌಲಿಂಗ್ ಎರಡೂ ವಿಭಾಗದಲ್ಲೂ ಪ್ರಬಲವಾಗಿದೆ. ಹೀಗಾಗಿ ಸರ್ಫಾಜ್ ಪಡೆಯನ್ನು ಕೊಹ್ಲಿ ಪಡೆ ಹಗುರವಾಗಿ ಪರಿಗಣಿಸುವಂತಿಲ್ಲ.

ಅಂತೆಯೇ ಫೀಲ್ಡಿಂಗ್ ಕೂಡ ಉಭಯ ತಂಡಗಳು ಸಮನಾಗಿದ್ದು, ಕಳೆದ  ಬಾಂಗ್ಲಾದೇಶ ವಿರುದ್ಧ ಸೆಮಿಫೈನಲ್ ಪಂದ್ಯದ ಆರಂಭದಲ್ಲಿ ಭಾರತೀಯ ಫೀಲ್ಡರ್ ಗಳು ಮಾಡಿದ್ದ ಕೆಲ ಯಡವಟ್ಟುಗಳನ್ನು ಸುಧಾರಿಸಿಕೊಂಡರೆ ಖಂಡಿತಾ ಭಾರತ ತಂಡ ಪಾಕಿಸ್ತಾನದ ಮೇಲುಗೈ ಸಾಧಿಸುವುದರಲ್ಲಿ ಎರಡು  ಮಾತಿಲ್ಲ.

ಇನ್ನು ಕಳೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಆಟವಾಡುವ ಮೂಲಕ ಫಾರ್ಮ್ ಗೆ ಮರಳಿದ್ದಾರೆ. ಹೀಗಾಗಿ ಇಂದೂ ಕೂಡ ಅದೇ ಪ್ರದರ್ಶನವನ್ನು  ನಿರೀಕ್ಷಿಸಲಾಗುತ್ತಿದೆ. ಇನ್ನು ಎರಡೂ ತಂಡಕ್ಕೂ ಇದು ಪ್ರತಿಷ್ಠೆಯ ಪಂದ್ಯ.ಇಂತಹ ಒಂದು ಪಂದ್ಯಕ್ಕೆ ಭಾರತದ ಕ್ರಿಕೆಟ್​​​ ಅಭಿಮಾನಿಗಳು ದಶಕಗಳ ಕಾಲ ಕಾಯಬೇಕಾಯ್ತು. ಬದ್ಧ ವೈರಿಗಳ ವಿರುದ್ಧ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆಗಾಗಿ ಕಾದು ಕುಳಿತಿದ್ದ ಟೀಂ ಇಂಡಿಯಾ, ಕ್ರಿಕೆಟ್​​​ ಪ್ರೇಮಿಗಳಿಗೆ ಕೊನೆಗೂ ಆ ಕ್ಷಣ ಉಣಬಡಿಸಲು ಸಜ್ಜಾಗಿದೆ. ಈ ಮಧ್ಯೆ  ಬಾಂಗ್ಲಾ ವಿರುದ್ದ ಆಡಿದ ಆಟಗಾರರನ್ನೇ ಭಾರತ ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ.

 

Key words: Champions Trophy- Countdown -Indo-Pak- War -Today’s Final