ಕೊನೆಗೂ ಕನ್ನಡಿಗರ ಹೋರಾಟಕ್ಕೆ ತಲೆಬಾಗಿದ ಕಟ್ಟಪ್ಪ ಪಾತ್ರದ ನಟ ಸತ್ಯರಾಜು; ಕ್ಷಮೆ ಕೇಳಿದ್ದು ಹೀಗೆ…….

0
1529
caveri dispute-actor satyaraj- sorry-bahubali-2

ಚೆನ್ನೈ,ಏ,2017(www.justkannada.in): ಕಾವೇರಿ ವಿವಾದ ಕುರಿತು ಕನ್ನಡಿಗರ ಬಗ್ಗೆ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದ ಬಾಹುಬಲಿ ಚಿತ್ರದ ಕಟ್ಟಪ್ಪ ಪಾತ್ರದಾರಿ ನಟ ಸತ್ಯರಾಜ್ ಕೊನೆಗೂ ಕನ್ನಡಿಗರ ಬಳಿ ಕ್ಷಮೆ ಕೋರಿದ್ದಾರೆ. caveri dispute-actor satyaraj- sorry-bahubali-2

ಕೊನೆಗೂ ಕನ್ನಡಿಗರ ಹೋರಾಟಕ್ಕೆ ತಲೆಬಾಗಿರುವ ನಟ ಸತ್ಯರಾಜ್  ಯಾವತ್ತೂ ನಾನು ಕನ್ನಡಿಗರ ವಿರುದ್ದ ಅಲ್ಲ. ಕನ್ನಡಿಗರೇ ಬಾಹುಬಲಿ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಿ ಎಂದು ಕ್ಷಮೆ ಕೇಳಿದ್ದಾರೆ.

ನಿನ್ನೆ ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ, ಚಿತ್ರಕ್ಕೂ ನಟ ಸತ್ಯರಾಜ್ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ. ನಮ್ಮ ಶ್ರಮವನ್ನ ಬೆಂಬಲಿಸಿ ಬಾಹುಬಲಿ ಚಿತ್ರ ನೋಡಿ ಎಂದು ಮನವಿ ಮಾಡಿದ್ದರು. ಅಲ್ಲದೆ ಈ ಕುರಿತು ನಟ ಸತ್ಯರಾಜ್ ಜೊತೆ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದರು.

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡಿಗರ ಬಗ್ಗೆ ನಾಲಿಗೆಯನ್ನ ಹರಿಬಿಟ್ಟಿದ್ದ ನಟ ಸತ್ಯರಾಜು ಕ್ಷಮೆ ಕೋರಿದ್ದು ಹೀಗೆ …

 

 

 

 

key words; caveri dispute-actor satyaraj- sorry-bahubali-2