ಬೆಂಗಳೂರು,ಜ,12,2017(www.justkannada.in):  ಅಕ್ರಮ ಹಣ ವರ್ಗಾವಣೆ ಕೇಸ್ ಸಂಬಂಧಿಸಿದಂತೆ ಜೈಲಿನಲ್ಲಿರುವ ಭ್ರಷ್ಟ ಗುತ್ತಿಗೆದಾರ ಚಂದ್ರಕಾಂತ್ ರಾಮಲಿಂಗಂ ಗೆ ಕಾನೂನು ಸಲಹೆ ಪಡೆಯದೆ ಕಾವೇರಿ ನೀರಾವರಿ ನಿಗಮ 73.34 ಕೋಟಿ ವೆಚ್ಚದ ಗುತ್ತಿಗೆಯನ್ನ ನೀಡಿದೆ. Cauvery Irrigation Corporation -prison –corrupt- contractor- tender ....

ನೋಟ್ ಬ್ಯಾನ್ ಬಳಿಕ ಅಕ್ರಮ ಆಸ್ತಿ ಪತ್ತೆ ಕೇಸ್ ನಲ್ಲಿ ಸಿಲುಕಿ ಜೈಲಿನಲ್ಲಿರುವ ಕಾವೇರಿ ನೀರಾವರಿ ನಿಗಮ ಎಂಡಿ ಚಿಕ್ಕರಾಯಪ್ಪ ಆಪ್ತ  ರಾಮಲಿಂಗಂ ಗೆ ಟೆಂಡರ್ ನೀಡಲಾಗಿದೆ.

ಹಾರಂಗಿ ಜಲಾಶಯದ 25 ನೇ ಕಿ.ಮೀ ನಿಂದ 60 ನೇ ಕಿ ಮೀ ವರೆಗೂ ಸಿವಿಲ್ ಕಾಮಾಗಾರಿಯನ್ನು ನಡೆಸಲು ರಾಜ್ಯ ಸರ್ಕಾರ ಹಾರಂಗಿ ಬಲದಂಡೆಯ ಯೋಜನೆಗಾಗಿ ಟೆಂಡರ್ ಕರೆದಿತ್ತು. ಟೆಂಡರ್ ಪ್ರಕ್ರಿಯೆ ಅಕ್ಟೋಬರ್ 2016ರಂದು ನಡೆದಿತ್ತು.

ಈ ಸಂಬಂಧ ರಾಮಲಿಂಗಂ ಕನ್ಸ್ ಟ್ರಕ್ಷನ್  ಪ್ರೈಲಿ ಮಾಲೀಕನಾಗಿರುವ ಚಂದ್ರಕಾಂತ್ ರಾಮಲಿಂಗಂ ಬಿಡ್ ಸಲ್ಲಿಸಿದ್ದರು. ನಂತರ ಬ್ಲಾಕ್ ಅಂಡ್ ವೈಟ್ ಮನಿ ದಂಧೆ ಪ್ರಕರಣದಲ್ಲಿ ಸಿಬಿಐ ರಾಮಲಿಂಗಂ ನನ್ನ ಡಿ,6ರಂದು ಬಂಧಿಸಿ ಜೈಲಿಗೆ ಕಳುಹಿಸಿತ್ತು.

ನಂತರ ಸಿಎಂ ಸಿದ್ದರಾಮಯ್ಯ ರಾಮಲಿಂಗಂನನ್ನ ಬ್ಲಾಕ್ ಲೀಸ್ಟ್ ಗೆ ಸೇರಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಆದೇಶಕ್ಕೂ ಕ್ಯಾರೆ ಎನ್ನದೆ, ಕಾನೂನು ಸಲಹೆಯನ್ನೂ ಪಡೆಯದೆ ಕಾವೇರಿ ನೀರಾವರಿ ನಿಗಮ ಕಾಮಗಾರಿ ಟೆಂಡರ್ ಗೆ ನಿನ್ನೆ ಅಧಿಕೃತ ಅನುಮೋದನೆ ನೀಡಿದೆ.

ಮೈಸೂರು ವಿಭಾಗದ ಮುಖ್ಯ ಇಂಜಿನಿಯರ್ ಅನುಮೋದನೆ ನೀಡಿದ್ದು, ಜೈಲಿನಲ್ಲೆ ಟೆಂಡರ್ ಅನುಮೋದನೆ ಪತ್ರಕ್ಕೆ ರಾಮಲಿಂಗಂ ಅವರಿಂದ ಸಹಿ ಹಾಕಿಸಿಕೊಳ್ಳಲಾಗಿದೆ.ಅಲ್ಲದೆ ಎಂಟು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ರಾಮಲಿಂಗಂ ಕಂಪನಿಗೆ ಸೂಚನೆ ನೀಡದೆ  ಎಂದು ಹೇಳಲಾಗುತ್ತಿದೆ.

ಹೀಗೆ ಬ್ಲ್ಯಾಕ್ ಲಿಸ್ಟ್ ನಲ್ಲಿ ಸೇರಬೇಕಾದ ಗುತ್ತಿಗೆದಾರನಿಗೆ ಕಾವೇರಿ ನೀರಾವರಿ ನಿಗಮ 73 ಕೋಟಿ ವೆಚ್ಚದ ಟೆಂಡರ್ ನೀಡಿರುವ ನಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

Key words: Cauvery Irrigation Corporation -prison –corrupt- contractor- tender ….