ಹಾಸನ,ಫೆಬ್ರವರಿ,13,2018(www.justkannada.in): ಇಂದಿರಾ ಕ್ಯಾಂಟೀನ್ ನಿರ್ಮಾಣ ವೇಳೆ ನಿರ್ಮಾಣ ಹಂತದ ಕಟ್ಟಡ ಮೇಲ್ಛಾವಣಿ ಕುಸಿದು ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.building-roof-collapsed-indira-kantin-construct-death

ಹಾಸನ ಜಿಲ್ಲೆ‌ ಸಕಲೇಶಪುರದಲ್ಲಿ ಈ ಘಟನೆ ನಡೆದಿದೆ, ಇಂದಿರಾ ಕ್ಯಾಂಟೀನ್ ನಿರ್ಮಾಣ ವೇಳೆ ಅವಘಡ, ಬಿಹಾರ ಮೂಲದ ಆಸಿಫ್(೩೦) ಮೃತಪಟ್ಟ ಕಾರ್ಮಿಕ, ಇಂದಿರಾ ಕ್ಯಾಂಟಿನ್ ನಿರ್ಮಾಣದ ವೇಳೆ ಕಟ್ಟಡ ಮೇಲ್ಛಾವಣಿ ಕುಸಿದು ಈ ದುರ್ಘಟನೆ ನಡೆದಿದೆ, ಘಟನೆ ವೇಳೆ ಕಾರ್ಮಿಕ  ಆಸಿಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.building-roof-collapsed-indira-kantin-construct-death

ಘಟನೆಯಿಂದ ಕಾಮಗಾರಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.  ತಂಡ ಹಾಸನದಲ್ಲಿ ಕಾಮಗಾರಿ ಮುಗಿಸಿ ಸಕಲೇಶಪುರದಲ್ಲಿ ಕಾಮಗಾರಿ ಶುರು ಮಾಡಿತ್ತು. ಸ್ಥಳಕ್ಕೆ ಸಕಲೇಶಪುರ ನಗರ ಠಾಣಾ ಪೋಲೀಸರು ‌ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Key words: building- roof -collapsed -indira Kantin – construct- Death