ಅಧಿಕಾರಿಗಳಿಂದ ಬಾಲ್ಯ ವಿವಾಹಕ್ಕೆ ಬಿತ್ತು ಬ್ರೇಕ್…

0
378
Breaking up - childhood marriage – officer ...

ದಾವಣಗೆರೆ,ಏ,21,2017(www.justkannada.in): ಮಕ್ಕಳ ಸಹಾಯವಾಣಿ, ಮಹಿಳಾ ಸಾಂತ್ವನ ಕೇಂದ್ರದ ಅಧಿಕಾರಿಗಳ ದಾಳಿ  ನಡೆಸಿ ನಡೆಯುತ್ತಿದ್ದ ಬಾಲ್ಯವಿವಾಹವನ್ನ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. Breaking up - childhood marriage – officer ...

ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ಮ್ಯಾಸರಗೇರಿಯಲ್ಲಿ  ಬಾಲ್ಯ ವಿವಾಹ ನಡೆಯುತ್ತಿತ್ತು. 22 ವರ್ಷದ ಯುವಕನ ಜೊತೆ 14 ವರ್ಷದ ಬಾಲಕಿಗೆ ಮದ್ವೆ ಮಾಡಲು ಪಾಲಕರು ಮುಂದಾಗಿದ್ದರು. ಈ ವೇಳೆ ಅಲ್ಲಿಗೆ ದಾಳಿ ನಡೆಸಿದ ಮಕ್ಕಳ ಸಹಾಯವಾಣಿ, ಮಹಿಳಾ ಸಾಂತ್ವನ ಕೇಂದ್ರದ ಅಧಿಕಾರಿಗಳು ಸುರಿಗೆ ನೀರು (ಮದ್ವೆ ಕೊನೆ ಕ್ಷಣದಲ್ಲಿ ಎರೆಯುವ ನೀರು) ಎರೆಯುವ  ಸಂದರ್ಭದಲ್ಲಿ  ವಿವಾಹಕ್ಕೆ ಬ್ರೇಕ್ ಹಾಕಿದ್ದಾರೆ.

ಈ ನಡುವೆ ಬಾಲ್ಯವಿವಾಹ ಮಾಡದಂತೆ ಎರಡೂ ಕುಟುಂಬದವರನ್ನ ಅಧಿಕಾರಿಗಳು  ಮನವೊಲಿಸುತ್ತಿದ್ದಾರೆ ಎನ್ನಲಾಗುತ್ತಿದೆ.

Key words: Breaking up – childhood marriage – officer …