ಬಿಜೆಪಿಯಲ್ಲಿ ಮತ್ತೆ ಭಿನ್ನಮತ: ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಶೋಭಾ ಕರಂದ್ಲಾಜೆ ವಿರುದ್ದ ಗರಂ ಆದ್ರಾ ಸದಾನಂದಗೌಡರು..?

0
581
BJP.-Sadananda Gowda -against -Shobha Karandlaje -president -campaign committee

ಬೆಂಗಳೂರು, ಅ.12,2017(www.justkannada.in): ಬಿಜೆಪಿಯ ರಾಜ್ಯ  ಸಾಂಪ್ರದಾಯಕ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನದಿಂದ ತಮ್ಮನ್ನ ಕೆಳಗಿಳಿಸಲು  ಸಂಸದೆ ಶೋಭಾ ಕರಂದ್ಲಾಜೆ ಒತ್ತಡ ಹಾಕಿದ್ದ ಹಿನ್ನೆಲೆ ಕೇಂದ್ರ ಸಚಿವ ಡಿವಿ ಸದಾನಂದ ಗೌಡರ ಗರಂ ಆಗಿದ್ದಾರೆ.BJP.-Sadananda Gowda -against -Shobha Karandlaje -president -campaign committee

ಇದರಿಂದ ಬಿಜೆಪಿಯಲ್ಲಿ ಭಿನ್ನಮತ ಕೇಳಿ ಬಂದಿದೆ.  ಬಿಜೆಪಿಯ ಸಂಸದೆ ಹಾಗೂ ಪ್ರಧಾನಕಾರ್ಯದರ್ಶಿ ಶೋಭಾ ಕರಂದ್ಲಾಜೆಯ ಒತ್ತಾಯದ ಮೇರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಸದಾನಂದ ಗೌಡರನ್ನು ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನದಿಂದ ಬದಲಿಸಿದ್ದಾರೆ ಎನ್ನಲಾಗುತ್ತಿದೆ. ಪಕ್ಷದ ಎಲ್ಲ ಸಮಿತಿಯ ಅಧ್ಯಕ್ಷ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೆ  ಬಿಜೆಪಿ ಪ್ರಚಾರ ಸಮಿತಿ ಪಟ್ಟಿ ಬಿಡುಗಡೆಯಾಗಿತ್ತು. ಸಾಂಪ್ರದಾಯಿಕ ಪ್ರಚಾರ ಸಮಿತಿ  ಅಧ್ಯಕ್ಷರನ್ನಾಗಿ ಸದಾನಂದಗೌಡರನ್ನ  ಹಾಗೂ ಆಧುನಿಕ ತಂತ್ರಜ್ಞಾನ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಸಂಸದ ಪ್ರಹ್ಲಾದ್ ಜೋಶಿ ಅವರನ್ನು ಆಯ್ಕೆ ಮಾಡಲಾಗಿತ್ತು.

ಆದರೆ ಕೇಂದ್ರ ಸಚಿವರಾಗಿರುವ ಸದಾನಂದ ಗೌಡರಿಗೆ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ನೀಡಬಾರದು. ಒಬ್ಬರಿಗೆ ಎರಡು ಹುದ್ದೆ ನೀಡುವುದು ಸರಿಯಲ್ಲ.  ಹೀಗಾಗಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನದಿಂದ ಡಿವಿ ಸದಾನಂದಗೌಡರನ್ನ ಕೆಳಗಿಳಿಸಬೇಕು ಎಂದು ಶೋಭಾ ಕರಂದ್ಲಾಜೆ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಅವರ ಬಳಿ ಒತ್ತಾಯ ಹಾಕಿದ್ದರು ಎನ್ನಲಾಗಿದೆ.

ಹೀಗಾಗಿ ದಿಢೀರನೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನದಿಂದ ತನ್ನನ್ನು ಕೆಳಗಿಳಿಸಿದ್ದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ಸದಾನಂದಗೌಡರು ಗರಂ ಆಗಿದ್ದಾರೆ  ಎಂದು ಹೇಳಲಾಗುತ್ತಿದೆ.

Key words: BJP.-Sadananda Gowda -against -Shobha Karandlaje -president -campaign committee