ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ…

0
313
BJP president -Amit Shah- arrives - Bangalore- airport

ಬೆಂಗಳೂರು,ಆ,12,2017(www.justkannada.in): ರಾಜ್ಯದಲ್ಲಿ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.BJP president -Amit Shah- arrives - Bangalore- airport

ವಿಸ್ತಾರ್ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಅಮಿತ್ ಶಾ ಅವರು ಆಗಮಿಸಿದ್ದು, ಇವರಿಗೆ ರಾಜ್ಯ ಬಿಜೆಪಿ ನಾಯಕರಾದ ಬಿಎಸ್ ಯಡಿಯೂರಪ್ಪ,ಎಸ್ ಎಂ ಕೃಷ್ಣ, ಅರವಿಂದ್ ಲಿಂಬಾವಳಿ ಸೇರಿ ಹಲವು ನಾಯಕರು ಸ್ವಾಗತ ಕೋರಿದರು.

ರಾಜ್ಯದಲ್ಲಿ ಅಮಿತ್ ಶಾ ಅವರು ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದು, ಮುಂದಿನ ವಿಧಾನಸಭೆ ಚುನಾವಣೆ ಸಿದ್ಧತೆ ಕುರಿತು ಪಕ್ಷದ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.

ಅಮಿತ್ ಶಾ ಇಂದಿನ ಕಾರ್ಯಕ್ರಮಗಳು

* ಬೆಳಗ್ಗೆ 10.45ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮನ
* ಬೆಳಗ್ಗೆ 11 ಗಂಟೆಗೆ ಟೋಲ್ ಗೇಟ್ ಬಳಿ ಕಾರ್ಯಕರ್ತರ ಸ್ವಾಗತ, ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ
* ಬೆಳಗ್ಗೆ 12 ಗಂಟೆಗೆ ಬಿಜೆಪಿ ಕಚೇರಿಗೆ ಭೇಟಿ, ಗ್ರಂಥಾಲಯ ಉದ್ಘಾಟನೆ
* ಮಧ್ಯಾಹ್ನ 12.30 ಪಕ್ಷದ ಕಚೇರಿಯಲ್ಲಿ ಪ್ರಮುಖರ ಸಮಿತಿ ಸಭೆ
* ಮಧ್ಯಾಹ್ನ 2.30 ವಿಧಾನಸಭೆ, ವಿಧಾನಪರಿಷತ್ ಶಾಸಕರ ಜೊತೆ ಸಭೆ
* ಸಂಜೆ 4 ಗಂಟೆಗೆ ಪದಾಧಿಕಾರಿಗಳು, ಮೋರ್ಚಾ ಅಧ್ಯಕ್ಷರು, ಜಿಲ್ಲಾಧ್ಯಕ್ಷರ ಸಭೆ
* ಸಂಜೆ 6.15 ಸಾಹಿತಿಗಳು, ವೈದ್ಯರು, ಇಂಜಿನಿಯರ್ಗಳು, ಚಿತ್ರನಟರು, ಸಾಫ್ಟ್ವೇರ್ ತಂತ್ರಜ್ಞರ ಜೊತೆ ಸಭೆ.

key words:BJP president -Amit Shah- arrives – Bangalore- airport