ಬಿಜೆಪಿಯವರಿಗೆ ಶಿಸ್ತು ಯಾವತ್ತೂ ಇರಲಿಲ್ಲ : ಅವರಲ್ಲಿ ಬರೀ ಅಶಿಸ್ತು- ಸಿಎಂ ಸಿದ್ದರಾಮಯ್ಯ ವಾಗ್ದಾಳಿ….

0
345
BJP -never -discipline- CM Siddaramaiah ...

ಉಡುಪಿ,ಏ,21,2017(www.justkannada.in): ಬಿಜೆಪಿಯವರಲ್ಲಿ ಶಿಸ್ತು ಯಾವತ್ತೂ ಇರಲಿಲ್ಲ. ಅಶಿಸ್ತೇ ಅವರಲ್ಲಿರುವ ಶಿಸ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು. BJP -never -discipline- CM Siddaramaiah ...

ಉಡುಪಿ ಬಾರ್ಕೂರು ಮಹಾಸಂಸ್ಥಾನದ ಉದ್ಘಾಟನೆಗೆ ಆಗಮಿಸಿದ ಸಿಎಂ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡಿ, ಈಶ್ವರಪ್ಪ ಮತ್ತು ಟೀಂ ಯಡಿಯೂರಪ್ಪ ವಿರುದ್ಧ ಒಳಗೊಳಗೆ ಕತ್ತಿ ಮಸಿಯುತ್ತಿದ್ದಾರೆ. ಅದು ಯಾವಾಗ ಮಹಾಸ್ಪೊಟವಾಗುತ್ತೋ ಗೊತ್ತಿಲ್ಲ. ಯಡಿಯೂರಪ್ಪ ಹೇಳಿದ ತಕ್ಷಣ ಮಿಶನ್ 150 ಆಗಲ್ಲ. ಅವರಿಗೆ ಟಾರ್ಗೆಟ್ ಕೊಟ್ಟೋರು ಯಾರು. ಓಟು ಹಾಕೋರು ರಾಜ್ಯದ ಜನ ಎಂದರು.ಕೆಂಪು ದೀಪ ತೆರವು ವಿಚಾರ; ನಾವು ಪರಿಶೀಲಿಸುತ್ತೇವೆ…

ಕೆಂಪು ದೀಪ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ಇದನ್ನ ಬಿಜೆಪಿ ಅಧಿಕಾರವಿರುವ ಸಿಎಂಗಳು ಸ್ವಾಗತ ಮಾಡಿದ್ದಾರೆ. ನಾವು  ಈ ಬಗ್ಗೆ ಪರಿಶೀಲನೆ ಮಾಡ್ತೇವೆ ಎಂದು ತಿಳಿಸಿದರು.

ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಇಲ್ಲ….

ಮುಂದಿನ ಮಹಾ ಚುನಾವಣೆಯಲ್ಲಿ ಯಾರೊಂದಿಗೂ ಸಹ ನಾವು  ಮೈತ್ರಿ ಮಾಡಿಕೊಳ್ಳುವುದಿಲ್ಲ. ದೇವೇಗೌಡರ ಮೇಲೆ ಮಾತ್ರವಲ್ಲ ಎಲ್ಲರ ಮೇಲೂ ಪ್ರೀತಿ ಇದೆ. ಬಿಎಸ್ ವೈ ಜೊತೆಗೂ ಮಾತಾಡ್ತೇನೆ.ರಾಜಕೀಯದಲ್ಲಿ ಶತ್ರುಗಳೂ ಇಲ್ಲ ಪರ್ಮನೆಂಟ್ ಮಿತ್ರರೂ ಇಲ್ಲ. ಜಾತ್ಯಾತೀತ ಶಕ್ತಿಗಳು ಜೊತೆಯಾಗೋದು ಒಳ್ಳೇದು. ಮಹಾ ಘಟ್ ಬಂಧನ್ ಉತ್ತಮ ಬೆಳವಣಿಗೆ.ಆದರೆ ಕರ್ನಾಟಕದ ಸ್ಥಿತಿ ಬೇರೆ ಇದೆ ಎಂದು ಹೇಳಿದರು.

ಇನ್ನು  ಮರಳು ದಂಧೆಕೋರರಿಂದ ಡಿಸಿ ಎಸಿ ಕೊಲೆಗೆ ಯತ್ನ ಪ್ರಕರಣ ಸಂಬಂಧ ಡಿಸಿ ಮೇಲೆ ಕೊಲೆಯತ್ನ  ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ.ಪ್ರಕರಣದಲ್ಲಿ ಯಾರನ್ನೂ ರಕ್ಷಿಸೋಲ್ಲ.ಬಾಕಿ ಆರೋಪಿಗಳ ಬಂಧನ ಮಾಡ್ತೇವೆ ಎಂದು ಮಾಹಿತಿ ನೀಡಿದರು.

ನಾನು ದೇವರ ವಿರುದ್ದ ಅಲ್ಲ……

ಈ ನಡುವೆ ನಾನು ದೇವರ ವಿರುದ್ಧ ಅಲ್ಲ. ಧಾರ್ಮಿಕ ಕಾರ್ಯಕ್ರಮ ವಿರುದ್ದವೂ ಅಲ್ಲ. ಪದೇ ಪದೇ ದೇವರ ಮೊರೆ ಹೋಗಲ್ಲ.ದೇವರನ್ನು ಹುಡ್ಕೊಂಡು ಕಾಶ್ಮೀರಕ್ಕೆ ಹೋಗಲ್ಲ. ನಮ್ಮ ಊರ ದೇವರು ಸಾಕು. ಕೃಷ್ಣಮಠಕ್ಕೆ ಹೋಗುವ ಅವಕಾಶ ಸಿಕ್ಕಿಲ್ಲ ಅಷ್ಟೇ ಎಂದು ಸಿದ್ದರಾಮಯ್ಯ ಹೇಳಿದರು.

Key words: BJP -never -discipline- CM Siddaramaiah …