ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ ಕೊಲೆ ಕೇಸ್; ಪ್ರಮುಖ ಆರೋಪಿ ಬಿಲ್ಡರ್  ಮಂಜು ಅರೆಸ್ಟ್…..

0
1377
BJP leader Srinivas Prasad- murder case- Arrest -accused

ಆನೇಕಲ್ ,ಮಾ,20,2017(www.justkannada.in):  ಆನೇಕಲ್ ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ ಕೊಲೆಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಬಾಡಿ ಬಿಲ್ಡರ್ ಮಂಜನನ್ನ ಪೊಲೀಸರು ಬಂಧಿಸಿದ್ದಾರೆ.

ಮಾರ್ಚ್ 14ರ ಮುಂಜಾನೆ ಬಿಟಿಎಲ್ ಕಾಲೇಜು ಮುಂಭಾಗದಲ್ಲಿ ಬಿಜೆಪಿ ಮುಖಂಡ  ವಾಸು ಅಲಿಯಾಸ್ ಶ್ರೀನಿವಾಸರವರನ್ನು ಕರೆಸಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಬೊಮ್ಮಸಂದ್ರ ಪುರಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಅಧ್ಯಕ್ಷ ಗಾದಿಗಾಗಿ ತೀವ್ರ ಪೈಪೊಟಿ ನಡೆದಿತ್ತು,ಶ್ರೀನಿವಾಸ್ ಪ್ರಸಾದ್ ಬಿಜೆಪಿಯ ಪುರಸಭೆಯ ಸದಸ್ಯರಾಗಿದ್ದರು. ಕಾಂಗ್ರೆಸ್ ನ  ಪುರಸಭೆ ಸದಸ್ಯೆ ಸರೋಜಮ್ಮನನ್ನು ಅಧ್ಯಕ್ಷೆ ಮಾಡಲು ಸರೋಜಮ್ಮಳ ಮಗ ಬಾಡಿ ಬೀಲ್ಡರ್ ಮಂಜ ಶ್ರೀನಿವಾಸ್ ಪ್ರಸಾದರನ್ನು ಕೊಲೆ ಮಾಡಿ ತಲೆಮರಿಸಿಕೊಂಡಿದ್ದ.

ಇದೀಗ ಶಿವಮೊಗ್ಗದಲ್ಲಿ ಬೆಂಗಳೂರು ಪೊಲೀಸರು ಬಿಲ್ಡರ್ ಮಂಜನನ್ನ ಬಂಧಿಸಿದ್ದಾರೆ.

Key words;  BJP leader Srinivas Prasad- murder case- Arrest -accused