ಬಿಜೆಪಿಯವರದ್ದು ಗೂಡ್ಸೆ ಹಿಂದೂತ್ವ, ನಮ್ಮದು ಗಾಂಧಿಹಿಂದೂತ್ವ- ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್..

0
136
BJP -Goodse Hindutva -ours - Gandhism. KPCC President -SR Patil.

ರಾಯಚೂರು,ಜನವರಿ,12,2018(www.justkannada.in): ಬಿಜೆಪಿಯವರು ಮಾತ್ರ ಹಿಂದೂತ್ವವಾದಿಗಳಲ್ಲ, ನಾವು ಹಿಂದೂಗಳು. ಅವರ ಹಾಗೆ ಜಾತಿ ಒಡೆಯುವ ಗೂಡ್ಸೆ ಹಿಂದೂತ್ವವಾದಿಗಳಲ್ಲ. ನಮ್ಮದ್ದು ಗಾಂಧಿಹಿಂದೂತ್ವವಾದಿಗಳು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಹೇಳಿದರು.

ನಗರದ ಮಂತ್ರಾಲಯ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಒಡೆದ ಮನೆಯಾಗಿದ್ದು, ಆಂತರಿಕ ಭಿನ್ನಾಬಿಪ್ರಾಯಗಳು ತಾರಕ್ಕೇರಿರುವುದರಿಂದ ಅವರು ಹಿಂದೂತ್ವದ ಜಪಮಾಡುತ್ತಿದ್ದಾರೆ, ಅವರದ್ದು ಜಾತಿಗಳನ್ನು ಒಡೆಯುವ ಗೂಡ್ಸೆ ಹಿಂದುತ್ವವಾದಿಗಳಾದರೆ, ನಮ್ಮದ್ದು ಎಲ್ಲರನ್ನು ಸೇರಿಸುವ ಗಾಂಧಿಹಿಂದುತ್ವವಾದಿಗಳು ಎಂದರು.

ಬಿಜೆಪಿ ಆಂತರಿಕೆ ಕಚ್ಚಾಟದಿಂದ ಅಧಿಕಾರಕ್ಕೆ ಬರುವುದು ಕನಸಾಗಿದ್ದು, 5 ವರ್ಷದಲ್ಲಿ 3 ಮುಖ್ಯಮಂತ್ರಿಗಳನ್ನು ಬದಲಾಯಿಸಿದ ಕೀರ್ತಿ ಬಿಜೆಪಿಯದಾಗಿದೆ, ಆಡಳಿತ ನಡೆಸಿದ ಪಕ್ಷ ಇಂದು ಪ್ರಮುಖ ವಿರೋಧ ಪಕ್ಷದ ಸ್ಥಾನದಲ್ಲೂ ಕೂಡಲು ಸಾಧ್ಯವಾಗಿಲ್ಲ. ಅವರು ಅಧಿಕಾರಕ್ಕೆ ಬರುತ್ತಾರೆನ್ನುವುದು ಕನಸಿನ ಮಾತಾಗಿದೆ. ದೇವದುರ್ಗ ತಾಲೂಕಿನ ಅಭಿವೃದ್ಧಿಗೆ ನೀಡಿರುವ 1600 ಕೋಟಿ ರೂ. ಅವ್ಯವಹಾರ ಕುರಿತು ಸದನ ಸಮಿತಿ ಮುಂದಿದ್ದು ವರದಿ ಆಧಾರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ಎಐಸಿಸಿ ಮಟ್ಟದಲ್ಲಿ ನಡೆಯಲಿದ್ದು ಸಾಮಾಜಿಕ ನ್ಯಾಯದಡಿ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡಲಿದ್ದು, ಈಗಾಗಲೇ ಸ್ಥಳೀಯ ಮಟ್ಟದಿಂದ ಮಾಹಿತಿ ಸಂಗ್ರಹ ಕಾರ್ಯ ಪೂರ್ಣಗೊಂಡಿದ್ದು, ಅತಿ ಶೀಘ್ರದಲ್ಲಿ ಎಐಸಿಸಿ ಮಟ್ಟದ ಸಭೆ ನಡೆಯಲಿದೆ ಎಂದು ತಿಳಿಸಿದರು.

key words: BJP -Goodse Hindutva -ours – Gandhism. KPCC President -SR Patil.