ಬಿಜೆಪಿ ಡೋಂಗಿ ಪಕ್ಷ:  ಕಾಂಗ್ರೆಸ್ ಮುಕ್ತ ಭಾರತ ಮಾಡಲು ಯಾರಿಂದಲೂ ಸಾಧ್ಯವಿಲ್ಲ- ರಾಯಚೂರು ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ…

0
598
BJP -Dongi Party -Congress free- India- CM Siddaramaiah.

ರಾಯಚೂರು,ಆ,12,2017(www.justkannada.in): ಬಿಜೆಪಿಗೆ ಮತ್ತೊಂದು ಅನ್ವರ್ಥ ನಾಮ ಅಂದ್ರೆ ಡೋಂಗಿ ಪಕ್ಷ ಅಂತಾ. ಬಿಜೆಪಿ ನಾಯಕರು ಡೋಂಗಿಗಳು ಕಾಂಗ್ರೆಸ್ ಮುಕ್ತ ಭಾರತ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಟಿ ಬೀಸಿದರು.BJP -Dongi Party -Congress free- India- CM Siddaramaiah.

ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಚಾಲನೆ ನೀಡಿದರು. ಚಾಲನೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸರ್ಕಾರದ ಯೋಜನೆಗಳನ್ನ ಬಿಜೆಪಿಯವರು ಟೀಕಿಸಿದರು. ಅನ್ನಭಾಗ್ಯ ಯೋಜನೆಯಿಂದ ಜನರು ಸೋಮಾರಿಗಳಾಗುತ್ತಾರೆ ಎಂದು ಟೀಕಿಸಿದ್ದಾರೆ. ಈ ಮೂಲಕ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ. ನಾನು ಸಿಎಂ ಆದ ಅರ್ಧಗಂಟೆಯಲ್ಲೇ ಅನ್ನಭಾಗ್ಯ ಯೋಜನೆ ಘೋಷಿಸಿದೆ. ಚುನಾವಣೆ ವೇಳೆ ನೀಡಿದ್ದ 165 ಭರವಸೆಗಳ ಪೈಕಿ 155 ಭರವಸೆಗಳನ್ನ ಈಡೇರಿಸಿದ್ದೇನೆ. ಹೀಗೆ ನುಡಿದಂತೆ ನಡೆದಿದ್ದೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿಯಿಂದ ಬಸವಣ್ಣನವರ ನಾಡಿನಲ್ಲಿ ಕೋಮುವಾದ ಬೆಂಕಿ ಹಚ್ಚುವ ಕೆಲಸ…

ಬಿಜೆಪಿ ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವದ ವಿರೋಧಿಗಳು. ಇವರು ಬಸವಣ್ಣನ ನಾಡಿನಲ್ಲಿ ಕೋಮುವಾದದ ಬೆಂಕಿ ಹಚ್ಚುತ್ತಿದ್ದಾರೆ.ಈ ಮೂಲಕ ಮತಗಳ ವಿಭಜನೆಗೆ ಯತ್ನಿಸುತ್ತಿದ್ದಾರೆ. ಆದರೆ ಇದು ಯಶಸ್ಸಾಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದರು.

ವಾಜಿಪೇಯಿ ಸರ್ಕಾರದ ವೇಳೆ ಉಪ ಪ್ರಧಾನಿ ಅಡ್ವಾಣಿ ಅವರಿಗೆ ಪತ್ರ ಬರೆದು ಹೈ-ಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ಅದು ಆಗಲ್ಲ  ಎಂದು ಅಡ್ವಾಣಿ ಹೇಳಿದ್ದರು. ಹೀಗಾಗಿ ಹೈದರಬಾದ್-ಕರ್ನಾಟಕ ಭಾಗದ ಅಭಿವೃದ್ದಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ ಎಂದು ಲೇವಡಿ ಮಾಡಿದರು.

Key words: BJP -Dongi Party -Congress free- India- CM Siddaramaiah.