ಬಿಜೆಪಿಯವರನ್ನು ಪೊಲೀಸರು ಬಂಧಿಸುವ ಅಗತ್ಯವಿಲ್ಲ: ರಾಜ್ಯದ ಜನರೇ ಅರೆಸ್ಟ್ ಮಾಡ್ತಾರೆ- ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕಿಡಿ…

0
128
BJP -does not-arrested -police-people - CM Siddaramaiah

ಮೈಸೂರು,ಜನವರಿ,12,2018(www.justkannada.in): ಬಿಜೆಪಿಯವರನ್ನು ಪೊಲೀಸರೇ ಬಂಧಿಸುವ ಅಗತ್ಯವಿಲ್ಲ. ಅವರನ್ನ ರಾಜ್ಯದ ಜನರೇ ಅರೆಸ್ಟ್ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದರು.BJP -does not-arrested -police-people - CM Siddaramaiah

ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜನರ ಮನಸ್ಸಿನಲ್ಲಿ ಕೋಮು ಭಾವನೆ ಬಿತ್ತುವವರನ್ನ ಹಾಗೂ ಸಮಾಜದಲ್ಲಿ ಬೆಂಕಿ ಹಚ್ಚುವವರನ್ನು ಜನರೇ ಬಂಧಿಸುತ್ತಾರೆ. ಪ್ರಧಾನಿ ಮೋದಿ ಕಾಂಗ್ರೆಸ್ ವೈಪಲ್ಯ ತೋರಿಸುವ ಮೊದಲು ನಾನು ಮೋದಿ ಅವರ ವೈಪಲ್ಯ ಬಿಚ್ಚಿಡುತ್ತೇನೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಒಂದು ತಿಂಗಳ ಪ್ರವಾಸ ಚೆನ್ನಾಗಿತ್ತು. ನಾವು ಜಾರಿಗೆ ತಂದಿರುವ ಎಲ್ಲಾ ಯೋಜನೆಗಳು ರಾಜ್ಯದ ಎಲ್ಲಾ ಭಾಗಗಳಿಗೂ ತಲುಪಿದ್ದು, ನಮ್ಮ ಪರ ರಾಜ್ಯದ ಜನರು ಒಲವು ತೋರಿದ್ದಾರೆ. ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

key words: BJP -does not-arrested -police-people – CM Siddaramaiah