ಬೇಕಾಗುವ ಸಾಮಗ್ರಿಗಳು
*ಒಂದು ಮಧ್ಯಮ ಗಾತ್ರದ ಹೂಕೋಸು
*3 ಚಮಚ ಎಣ್ಣೆ(ಆಲಿವ್ ತೈಲ ಒಳ್ಳೆಯ ಫಲಿತಾಂಶ ನೀಡುವುದು)
*½ ದಾಲ್ಚಿನಿ ಚಕ್ಕೆ
*3 ಏಲಕ್ಕಿ
*2-3 ಲವಂಗ
*ಒಂದು ಮಧ್ಯಮ ಗಾತ್ರದ ಈರುಳ್ಳಿ(ದೊಡ್ಡದಾಗಿ ಸ್ಲೈಸ್ ಮಾಡಿಕೊಳ್ಳಿ)
*½ ಚಮಚ ಅರಿಶಿನ
*½ ಚಮಚ ಮೆಣಸಿನ ಹುಡಿ
*1 ಮಧ್ಯಮ ಗಾತ್ರದ ಟೊಮೆಟೋ(ತುಂಡು ಮಾಡಿರುವುದು)
*ರುಚಿಗೆ ತಕ್ಕಷ್ಟು ಉಪ್ಪು
*2 ಚಮಚ ಬಾದಾಮಿ
*ಸ್ವಲ್ಪ ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ

1. ಹೂಕೋಸಿನ ತೊಟ್ಟನ್ನು ತೆಗೆದು ಬೇರೆ ಮಾಡಿ ಹೂವನ್ನು ತೆಗೆದು ಒಂದು ಪಾತ್ರೆಗೆ ಹಾಕಿಕೊಳ್ಳಿ. ಇದನ್ನು ತೊಳೆದು ಹೂವನ್ನು ದೊಡ್ಡ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ಅದನ್ನು ಹುಡಿ ಮಾಡಿಕೊಳ್ಳಿ. ಇದನ್ನು ಮಿಕ್ಸಿಗೆ ಹಾಕಿ ಒಂದೆರಡು ಸುತ್ತು ತಿರುಗಿಸಬಹುದು. 2.ಒಂದು ಸಣ್ಣ ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ದಾಲ್ಚಿನಿ, ಏಲಕ್ಕಿ ಹಾಗೂ ಲವಂಗ ಹಾಕಿ. ಕೆಲವು ನಿಮಿಷ ಬಿಟ್ಟು ದೊಡ್ಡ ತುಂಡು ಮಾಡಿದಂತಹ ಈರುಳ್ಳಿಯನ್ನು ಇದಕ್ಕೆ ಹಾಕಿಕೊಂಡು ಸುಮಾರು 7ರಿಂದ ಹತ್ತು ನಿಮಿಷ ಬೇಯಲು ಬಿಡಿ. ಈರುಳ್ಳಿ ಕೆಂಪು ಬಣ್ಣಕ್ಕೆ ತಿರುಗುವ ತನಕ ಬೇಯಿಸಿ. 3.ಈಗ ಮಿಕ್ಸಿಯಲ್ಲಿ ಹಾಕಿದ್ದ ಹೂಕೋಸನ್ನು ಹಾಕಿಕೊಂಡು ಎಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಸರಿಯಾಗಿ ಮಿಶ್ರಣ ಮಾಡಿಕೊಳ್ಳುತ್ತಾ ಸುಮಾರು ಐದು ನಿಮಿಷ ಬೇಯಲು ಬಿಡಿ. 4.ಅರಿಶಿನ ಹುಡಿ ಮತ್ತು ಮೆಣಸಿನ ಹುಡಿ ಹಾಕಿಕೊಳ್ಳಿ. ಸರಿಯಾಗಿ ಮಿಶ್ರಣ ಮಾಡಿದ ಬಳಿಕ ಟೊಮೆಟೋವನ್ನು ಹಾಕಿಕೊಂಡು ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. 5. 6 ರಿಂದ 7 ನಿಮಿಷ ಕಾಲ ಹದವಾದ ಇದನ್ನು ಬೇಯಿಸಿ, ಅಲ್ಲದೆ ತಳ ಹಿಡಿಯದಂತೆ ನೋಡಿಕೊಳ್ಳಿ. ಈಗ ಬಾದಾಮಿ ಹಾಕಿಕೊಂಡು ಅದಕ್ಕೆ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿದರೆ ಬಿರಿಯಾನಿ ರೆಡಿ.