ಮೈಸೂರಿನಲ್ಲಿ ಬದಿಯ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ದ್ವಿಚಕ್ರವಾಹನ ಸವಾರ ಸಾವು

0
452

ಮೈಸೂರು,ಡಿ,7,2017(www.justkannada.in): ರಸ್ತೆ ಬದಿಯಿದ್ದ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ವಿದ್ಯುತ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.  bike-collided-mysore-death-motorcycle-rider

ಮೈಸೂರು-ಬೆಂಗಳೂರು ರಸ್ತೆ ಬನ್ನಿಮಂಟಪ ಬಳಿ ಈ ಘಟನೆ ನಡೆದಿದೆ. ಕುಶಾಲನಗರ ಟಿಬೆಟಿಯನ್ ಕಾಲೋನಿಯ ತೆಂಜಿನ್ ಖೆಂಟ್ಸೆ (26) ಮೃತಪಟ್ಟ ವ್ಯಕ್ತಿ. ಖೆಂಟ್ಸೆ ಬನ್ನಿಮಂಟಪದ ಬಳಿ ಬಾಡಿಗೆಗೆ ರೂಮಿನಲ್ಲಿ ವಾಸವಿದ್ದರು. ಇಂದು ಮುಂಜಾನೆ ಬನ್ನಿ ಮಂಟಪದ ಬಳಿ ಬೈಕ್ ನಲ್ಲಿ ತೆರಳುವಾಗ ಘಟನೆ ನಡೆದಿದೆ.

ಮಂಜುಕವಿದ  ವಾತಾವರಣವಿದ್ದ ಹಿನ್ನಲೆ, ಬೆಳಿಗ್ಗೆ  ರಸ್ತೆಯಲ್ಲಿರುವ ಹಂಪ್ಸ್ ನೋಡದೇ ಖೆಂಟ್ಸೆ  ವೇಗ ಚಾಲನೆ ಮಾಡಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ 100ಮೀ.ದೂರದಲ್ಲಿದ್ದ  ಮಣ್ಣಿನ ರಾಶಿ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಕುರಿತು ಎನ್ ಆರ್. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  bike- collided – Mysore- death -motorcycle rider.