ಈ ಸೀಸನ್’ನ ಬಿಗ್ ಬಾಸ್ ಮನೆಯಲ್ಲಿ ‘ಸಿಹಿ-ಕಹಿ’ ಚಂದ್ರು, ರಾಜೇಶ್ ನಟರಂಗ ! ಫುಲ್ ಡಿಟೈಲ್ಸ್ ಇಲ್ಲಿದೆ ನೋಡಿ…

0
3757

ಬೆಂಗಳೂರು, ಅಕ್ಟೋಬರ್ 11 (www.justkannada.in): ಶೋ ಬಿಗ್ ಬಾಸ್ ಸೀಸನ್ 5 ಇದೇ 15ರಿಂದ ಆರಂಭವಾಗುತ್ತಿದೆ. ಬಿಗ್ ಬಾಸ್ ಮನೆಗೆ ಹೊರಟವರು ಯಾರು ಎಂಬ ಪ್ರಶ್ನೆಗೆ ತೆರೆ ಬಿದ್ದಿದೆ!

ಬಿಗ್ ಬಾಸ್ ಸ್ಪರ್ಧಿಗಳ ಸಂಭಾವ್ಯರ ಹೆಸರು ಇಲ್ಲಿದೆ. ಹಿರಿಯ ನಟ ಸಿಹಿ ಕಹಿ ಚಂದ್ರು, ನಾಗ ಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ, ಕಿರುತೆರೆ ನಟಿ ವರ್ಷಿಣಿ ಕುಸುಮಾ, ಗಾಯಕಿಯರಾದ ಅನುರಾಧ ಭಟ್, ಕಿರುತೆರೆ ನಟಿ ಕವಿತಾ ಗೌಡ, ಹಾಗೂ ರಾಜೇಶ್ ನಟರಂಗ ಭಾಗವಹಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಸಲದ ಬಿಗ್ ಬಾಸ್ ಮನೆಯಲ್ಲಿ ಸೆಲೆಬ್ರಿಟಿಗಳ ಜೊತೆಗೆ ಜನ ಸಾಮಾನ್ಯರು ಕೂಡ ಪಾಲ್ಗೋಳ್ಳುತ್ತಿದ್ದಾರೆ. ಈ ಸೆಲೆಬ್ರಿಟಿಗಳು ಮತ್ತು ಜನ ಸಾಮಾನ್ಯರ ನಡುವಿನ ಹೊಂದಾಣಿಕೆ ಹೇಗಿರುತ್ತದೆ ಎಂಬ ಕುತೂಹಲ ಮೂಡಿದೆ. ಸೀಸನ್ 4ಕ್ಕಿಂತಲೂ ಈ ಬಾರಿಯ ಬಿಗ್ ಬಾಸ್ ಮನೆ ಸಖತ್ ಕಲರ್ ಫುಲ್ ಆಗಿರಲಿದೆಯಂತೆ. ಅಕ್ಟೋಬರ್ 15 ರಿಂದ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಲಿದೆ.