ಪತ್ನಿ ಸೌಂದರ್ಯವೇ ತಪ್ಪೆಂದು; ಆಕೆಯ ತಲೆ ಬೋಳಿಸಿ, ಹಲ್ಲೆನಡೆಸಿ ವಿಕೃತಿ ಮೆರೆದ ಪತಿಮಹಾಶಯ

0
868

ಬೆಂಗಳೂರು:ಏ-21:(www.justkannada.in)ಇಲ್ಲೋರ್ವ ಪತಿ ಮಹಾಶಯನಿಗೆ ಪತ್ನಿ ಸುಂದರವಾಗಿರುವುದೇ ತಪ್ಪಾಗಿಬಿಟ್ಟಿದೆ. ಪರ ಪುರುಷರು ನೋಡಬಾರದು, ಕೆಲಸಕ್ಕೆ ಹೋಗಬಾರದೆಂದು ಎಂದು ಪತಿಯೇ ಪತ್ನಿಯ ತೆಲೆ ಬೋಳಿಸಿ, ಆಕೆ ಸೌಂದರ್ಯವನ್ನ ವಿರೂಪಗೊಳಿಸಿರುವ ಹೀನ, ವಿಕೃತ ಎಸಗಿರುವ ಘಟನೆ ಬೆಂಗಳೂರಿನ ಕೆ ಜಿ ಹಳ್ಳಿಯಲ್ಲಿ ನಡೆದಿದೆ.

ಕೆ.ಜಿ ಹಳ್ಳಿಯಲ್ಲಿನ ಒಂದು ದಂಪತಿಗೆ ಏಳು ವರ್ಷಗಳ ಹಿಂದೆ ವಿವಾಹವಾಗಿತ್ತು. ಈ ದಂಪತಿಗಳಿಗೆ 4 ವರ್ಷದ ಮುದ್ದಾದ ಮಗು ಸಹ ಇದೆ. ಆದರೆ ಇಲ್ಲಿನ ಪತಿರಾಯನಿಗೆ ತನ್ನ ಹೆಂದತಿ ಸುಂದರವಾಗಿರುವುದೇ ದೊಡ್ಡ ತಪ್ಪು. ಮಹಿಳೆ ವಿವಾಹಕ್ಕು ಮುನ್ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಮದುವೆ ನಂತರ ಈಕೆ ಕೆಲಸಕ್ಕೆ ಹೋಗುವುದನ್ನು ಗಂಡ ತೀವ್ರವಾಗಿ ವಿರೋಧಿಸಿದ್ದಾನೆ. ಈ ವಿಚಾರವಾಗಿ ಹಲವಾರು ಬಾರಿ ಗಲಾಟೆ ಕೂಡ ಮಾಡಿದ್ದಾನೆ. ಪತ್ನಿ ಗಂಡನ ಒತ್ತಾಯಕ್ಕೆ ಮಣಿಯದ್ದಕ್ಕೆ ಕುಪಿತಗೊಂಡಿರುವ ಪತಿ ಆಕೆಯ ಸೌಂದರ್ಯವನ್ನು ವಿರೂಪಗೊಳಿಸಿದರೆ ಕೆಲಸಕ್ಕೆ ಹೋಗುವುದಿಲ್ಲವೆಂದು ಭಾವಿಸಿ ಆಕೆಯ ತಲೆ ಬೋಳಿಸಿ, ಮುಖಕ್ಕೆ ಗುದ್ದಿ ಹಲ್ಲೆ ನಡೆಸಿದ್ದಾನೆ.

ಇದರಿಂದ ಗಾಬರಿಗೊಳಗಾದ ನೊಂದ ಮಹಿಳೆ ವನಿತಾ ಸಹಾಯವಾಣಿಗೆ ದೂರು ಸಲ್ಲಿಸಿದ್ದಾರೆ. ತನಗೆ ಈ ನೀಚ ಗಂಡ ಬೇಡವೆಂದು ಹಾಗೂ ತಮಗೆ ರಕ್ಷಣೆ ನೀಡುವಂತೆ ಪತ್ನಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Bengaluru,Husband,Shaved, wife, Head