ಬೆಳಗಾವಿ, ನ.14, 2017 : (www.justkannada.in news ) ಖಾಸಗಿ ವೈದ್ಯರ ವೃತ್ತಿಗೆ ಸಂಬಂಧಿಸಿದಂತೆ ಮಸೂದೆ ಮಂಡನೆ ವಿವಾದ ತಳೆದ ಬೆನ್ನಲ್ಲೆ ಸಚಿವ ರಮೇಶ್ ಕುಮಾರ್ ಮಂಗಳವಾರ ವಿಧಾನ ಪರಿಷತ್ ಗೆ ಆಗಮಿಸಿ ಸ್ಪಷ್ಟನೆ ನೀಡಿದರು,

ವಿಧಾನ ಪರಿಷತ್ ನಲ್ಲಿ ಭಾವುಕರಾದ ಸಚಿವ ರಮೇಶ್ ಕುಮಾರ್, ನನ್ನ ಹಠಮಾರಿ ಧೋರಣೆಯಿಂದ ರಾಜ್ಯದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದರೆ ನಾನು ಕೊಲೆಗಾರನಾಗುತ್ತೇನೆ. ಖಾಸಗಿ ವೈದ್ಯರ ಮುಷ್ಕರದ ಬಗ್ಗೆ ಸದನದಲ್ಲಿ ಚಾಟಿ ಬೀಸಿದ ಸಚಿವ ರಮೇಶ್ ಕುಮಾರ್.

ಪುಟಪರ್ತಿ ಸಾಯಿಬಾಬರಿಂದ ಪ್ರೇರಣೆ ಪಡೆದಿರುವವನು ನಾನು, ಶಿಕ್ಷಣ, ನೀರು, ಆರೋಗ್ಯ ಸರ್ವರಿಗೂ ಸಿಗಬೇಕು ಎಂಬ ಅವರ ಧೋರಣೆ ನನಗೆ ಪ್ರೇರಣೆ. ಈ ಸಲುವಾಗಿಯೇ ವೈದ್ಯಕೀಯ ಬಿಲ್ ಮಸೂದೆ ಮಂಡನೆಗೆ ಮುಂದಾದದ್ದು. ಸಚಿವ ರಮೇಶ್ ಕುಮಾರ್ ಸ್ಪಷ್ಟನೆ.

key words : belegavi-medicle-bill-ramesh-kumar-protest