10 ಸಾವಿರ Hitz ಬರುವವರೆಗೆ youtube ಚಾನೆಲ್’ಗಳಿಗೆ ಆ್ಯಡ್ ಇಲ್ಲ !

0
1151

ನ್ಯೂಯಾರ್ಕ್, ಏಪ್ರಿಲ್ 14 (www.justkannada.in): ಇದೀಗ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂ (ವೈಪಿಪಿ) ನಲ್ಲಿ ಬದಲಾವಣೆ ಮಾಡಲಾಗಿದೆ. ಚಾನೆಲ್ ಗೆ 10 ಸಾವಿರ ವೀಕ್ಷಣೆ ಬರುವವರೆಗೆ ವಿಡಿಯೋ ಹಾಕಿರುವವರಿಗೆ ಹಣ ಸಂಪಾದನೆ ಮಾಡಲು ಸಾಧ್ಯವಾಗುವುದಿಲ್ಲ!

ಹೌದು. 2007ರಲ್ಲಿ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂನ ಸ್ಟ್ರೀಮಿಂಗ್ ಸೇವೆಯನ್ನು ಎಲ್ಲರಿಗಾಗಿ ಆರಂಭಿಸಲಾಯಿತು. ಇದರಡಿ ಸೇವೆ ಪಡೆಯಲು ಯಾರು ಬೇಕಾದರೂ ಸೈನ್ ಅಪ್ ಆಗಬಹುದಾಗಿದ್ದು, ವಿಡಿಯೋಗಳನ್ನು ಅಪ್ ಲೋಡ್ ಮಾಡಿದ ತಕ್ಷಣ ಅದನ್ನು ನೋಡಿದವರ ಸಂಖ್ಯೆ ಆಧಾರದ ಮೇಲೆ ಹಣ ಸಂಪಾದನೆ ಮಾಡಲು ಸಾಧ್ಯವಾಗುತ್ತಿತ್ತು. ಆದರೆ ಇನ್ನು ಮುಂದೆ 10 ಸಾವಿರ ವೀಕ್ಷಣೆಯಾಗದೆ ವೈಪಿಪಿ ವಿಡಿಯೋದಲ್ಲಿ ಯೂಟ್ಯೂಬ್ ಜಾಹೀರಾತು ನೀಡುವುದಿಲ್ಲ.

ಚಾನೆಲ್ ನ ಅವಧಿಯನ್ನು ನಿರ್ಧರಿಸಲು ಸಾಕಷ್ಟು ಮಾಹಿತಿ ನೀಡುತ್ತದೆ. ಚಾನೆಲ್ ಸಮುದಾಯದ ಮಾರ್ಗಸೂಚಿ ಮತ್ತು ಜಾಹೀರಾತುದಾರರ ನೀತಿಗಳನ್ನು ಅನುಸರಿಸುತ್ತಿದ್ದರೆ ಅದನ್ನು ದೃಢಪಡಿಸಲು ಅವಕಾಶ ನೀಡುತ್ತದೆ ಎಂದು ಯೂಟ್ಯೂಬ್ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ. 10 ಸಾವಿರ ವೀಕ್ಷಣೆಯ ಗುರಿ ಇಟ್ಟಿರುವುದರಿಂದ ಮುಂದಿನ ದಿನಗಳಲ್ಲಿ ಮಹಾತ್ವಾಕಾಂಕ್ಷಿ ಯೂಟ್ಯೂಬ್ ವಿಡಿಯೋ ರಚನೆಕಾರರ ಮೇಲೆ ಅಷ್ಟು ಪರಿಣಾಮ ಬೀರಲಿಕ್ಕಿಲ್ಲ ಎಂದು ನಾವು ಭಾವಿಸುತ್ತೇವೆ. 10 ಸಾವಿರ ವೀಕ್ಷಣೆಯಾದ ನಂತರ ಕಂಪೆನಿ ಅವರ ಚಟುವಟಿಕೆಗಳ ಪರಾಮರ್ಶೆ ನಡೆಸಿ ಚಾನೆಲ್ ನ್ನು ವೈಪಿಪಿಗೆ ಸೇರಿಸಲಾಗುತ್ತದೆ ಮತ್ತು ಜಾಹೀರಾತು ನೀಡಲು ಆರಂಭಿಸುತ್ತದೆ.