ಬಿಡಿಎ 2031ರ ಯೋಜನೆ ಎನ್ ಜಿಟಿ ಆದೇಶವನ್ನು ಉಲ್ಲಂಘನೆ ಮಾಡುತ್ತಿದೆಯೇ ಬಿಡಿಎ

0
144

ಬೆಂಗಳೂರು:ಡಿ-7:(www.jutkannada.in)ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)-2031ರ ಯೋಜನೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶ ಸ್ಪಷ್ಟ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರು ಪೂರ್ವದ ಕಸವನಹಳ್ಳಿ ಹಾಗೂ ಕೈಕೊಂಡರಹಳ್ಳಿ ಸರೋವರದ ಸುತ್ತಮುತ್ತಲ ನಿವಾಸಿಗಳು ಅಭಿವೃದ್ಧಿ ಹೆಸರಲ್ಲಿ ಬಿಡಿಎ ಪರಿಸರ ನಾಶಕ್ಕೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹದೇವಪುರ ಪರಿಸರ ಸಂರಕ್ಷಣಾ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಈ ಭಾಗದ ನಿವಾಸಿಗಳು ಕಸವನಹಳ್ಳಿ ಹಾಗೂ ಕೈಕೊಂಡರಹಳ್ಳಿ ಕೆರೆಗಳನ್ನು ಪುನರುಜ್ಜೀವನಗೊಳಿಸಿ, ಕೆರೆಗಳ ಸಂರಕ್ಷಣೆಗೆ ಹಲವಾರು ಅಭಿಯಾನ ನಡೆಸುವ ಮೂಲಕ ಎರಡೂ ಕೆರೆಗಳನ್ನು ಮಾದರಿ ಜಲಮೂಲಗಳನ್ನಾಗಿ ಪರಿವರ್ತಿಸಿವೆ. ಆದರೆ ಈಗ ಬಿಡಿಎ 2031ರ ಪರಿಷ್ಕೃತ ಯೋಜನೆಯಲ್ಲಿ ಈ ಕೆರೆಗಳ ಸುತ್ತಮುತ್ತ ಹಲವಾರು ಅಭಿವೃದ್ಧಿ ಯೋಜನೆ, ಕಾರಿಡಾರ್ ರಸ್ತೆಗಳು, ಕಟ್ಟಡ ನಿರ್ಮಾಣಗಳ ರೂಪುರೇಷೆ ಸಿದ್ಧಪಡಿಸಿದೆ.

2031 ರ ವೇಳೆಗೆ ಬೆಂಗಳೂರಿನಲ್ಲಿ 2.03 ಕೋಟಿ ಜನಸಂಖ್ಯೆ ಆಗಲಿದ್ದು, ಇದಕ್ಕೆ ಅನುಗುಣವಾಗಿ 80 ಚದರ ಕಿ.ಮೀ. ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 12-18 ಕ್ಯಾರೆಜ್ ವೇಗಳು, ಕಟ್ಟಡಗಳು, ರಾಜಕಾಲುವೆಗಳು ಸೇರಿದಂತೆ ಹಲವಾರು ಅಭಿವೃದ್ಧಿಯೋಜನೆಗಳು ಕೆರೆಯ ಬಫರ್ ಝೋನ್ ಮೂಲಕ ಹಾದುಹೋಗಲಿವೆ. ಬಫರ್ ಝೋನ್ ನಿಂದ 75 ಮೀಟರ್ ನಷ್ಟು ದೂರದಲ್ಲಿ ಕಾಮಗಾರಿ ನಡೆಸುವಂತೆ ಎನ್ ಜಿಟಿ ಆದೇಶವಿದೆ. ಆದರೆ ಬಿಡಿಎ ಅಭಿವೃದ್ಧಿ ನೆಪದಲ್ಲಿ ಎನ್ ಜಿಟಿ ಆದೇಶವನ್ನೇ ಉಲ್ಲಂಘನೆ ಮಾಡಿದೆ ಎಂಬುದು ಸ್ಥಳೀಯ ನಿವಾಸಿಗಳ ಆಕ್ರೋಶವಾಗಿದೆ.
BDA’S 2031 MASTERPLAN, ROADS THROUGH BUFFER ZONES
Plan in clear violation of NGT order that a 75-metre buffer zone has to be maintained It is all because of residents living close to Kasavanahalli and Kaikondrahalli lakes in Bengaluru east that these water bodies are still alive and not usurped for any developmental activities. The residents, under the aegis of Mahadevpura Parisara Samrakshane Abhivrudhi Samiti (MAPSAS), have been contributing funds and mobilising to maintain these lakes and have turned them into model water bodies.