ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ  ಅವರಿಂದ ಆ.16ರಂದು ಇಂದಿರಾ ಕ್ಯಾಂಟಿನ್ ಉದ್ಘಾಟನೆ- ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿಕೆ…

0
549
BBMP Commissioner- Manjunath Prasad -inaugurating - Indira cantin - October 16

ಬೆಂಗಳೂರು,ಆ,12,2017(www.justkannada.in): ಇದೇ ತಿಂಗಳ ೧೬ ರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಲಿದ್ದಾರೆ. ಜನರಿಗೆ ಅನುಕೂಲವಾಗಿರೋ ಜಾಗದಲ್ಲಿ ಕ್ಯಾಂಟೀನ್ ನಿರ್ಮಾಣ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು.BBMP Commissioner- Manjunath Prasad -inaugurating - Indira cantin - October 16

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ , ಪಾಲಿಕೆ ವ್ಯಾಪ್ತಿಯಲ್ಲಿ ೧೧೮೭ ಪಾರ್ಕ್, ೨೮೭ ಮೈದಾನ, ೨೨೭ ಇತರೆ ಜಾಗಗಳಿವೆ. ಪಾರ್ಕ್, ಮೈದಾನ ಅಂತ ನೊಟಿಫಿಕೇಷನ್ ಆಗಿರುವ ಜಾಗದಲ್ಲಿ ಒಂದೂ ಕ್ಯಾಂಟೀನ್ ನಿರ್ಮಾಣ ಮಾಡಿಲ್ಲ. ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಖಾಲಿ ಇದ್ದ ಜಾಗಗಳಲ್ಲಿ ಕ್ಯಾಂಟೀನ್ ನಿರ್ಮಾಣ ಮಾಡಲಾಗ್ತಿದೆ. ಕಸ ಹಾಕುತ್ತಿದ್ದ ಜಾಗ ಗುರ್ತಿಸಿ ಅಲ್ಲೂ ಕ್ಯಾಂಟೀನ್ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮರ್ಫಿ ಟೌನ್ ಗ್ರಂಥಾಲಯ ಡೆನಾಲಿಷನ್ ವಿಚಾರ ಸಂಬಂಧ, ಅದು ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿತ್ತು.ಇದೀಗ ಆ ಜಾಗದಲ್ಲಿ ಕ್ಯಾಂಟೀನ್ ನಿರ್ಮಾಣ ಮಾಡಲಾಗಿದೆ. ಹೈಟೆಕ್ ಆಗಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗ್ತಿದೆ ಎಂದು ತಿಳಿಸಿದ ಮಂಜುನಾಥ್ ಪ್ರಸಾದ್, ಇಂದಿರಾ ಕ್ಯಾಂಟೀನ್ ನಲ್ಲಿ ಗುಣಮಟ್ಟ, ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಲಾಗ್ತಿದೆ

ಇಂದಿರಾ ಕ್ಯಾಂಟೀನ್ ಗಾಗಿ ಹೊಸ ಆಪ್ ಸಿದ್ದಪಡಿಸಿದ್ದು ಶೀಘ್ರದಲ್ಲೇ ಅದು ಅನಾವರಣಗೊಳ್ಳಲಿದೆ. ಆ ಆಪ್ ಮೂಲಕ ಹತ್ತಿರದ ಐದು ಕ್ಯಾಂಟೀನ್ ನ ಮಾಹಿತಿ ಹಾಗೂ ಆ ದಿನದ ಮೇನು ಕೂಡ ಇರಲಿದೆ. ದೂರುಗಳು ಇದ್ದರೂ ಅದನ್ನೂ ಆಪ್ ನಲ್ಲಿ ಅವಕಾಶವಿದೆ. ಇಂದಿರಾ ಕ್ಯಾಂಟೀನ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿ ಕಳುಹಿಸಿದರೆ ಲಕ್ಷ ಬಹುಮಾನ  ನೀಡುವುದಾಗಿ ತಿಳಿಸಿದರು.

ಇನ್ನು ತಾಜ್  ಹೋಟೆಲ್ ನ ಮುಖ್ಯ ಚೆಫ್ ಹಾಗೂ ವಿದ್ಯಾರ್ಥಿ ಭವನದ ಕೆಲ ಮುಖ್ಯಸ್ಥ ರಿಂದ ಕ್ವಾಲಿಟಿ ಕುರಿತಂತೆ ಚರ್ಚೆ ನಡೆಸಲಾಗಿದೆ. 35 ಕಡೆ ಕ್ಯಾಂಟೀನ್ ನಿರ್ಮಾಣ ಕಾರ್ಯ ಆರಂಭಿಸಿ ವಾಪಸ್ ಪಡೆಯಲಾಗಿದೆ ಎಂದ ಮಂಜುನಾಥ್ ಪ್ರಸಾದ್, ಒಂದು ಕ್ಯಾಂಟೀನ್ ನಲ್ಲಿ ೭ ಸಿಬ್ಬಂದಿ ಕಾರ್ಯ ನಿರ್ವಹಣೆ ಮಾಡ್ತಿದ್ದಾರೆ. ಅಡುಗೆ ಮನೆಯಿಂದ ಕ್ಯಾಂಟೀನ್ ಗೆ ಊಟ ರವಾನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬೆಳಿಗ್ಗೆ ೭.೩೦ ರಿಂದ ೧೦.೩೦ ರ ವರೆಗೆ ತಿಂಡಿ ಮಧ್ಯಾಹ್ನ ೧೨.೩೦ ರಿಂದ ೨.೩೦ ರ ವರೆಗೆ ರಾತ್ರಿ ೭.೩೦ ರಿಂದ ೯.೩೦ ಗಂಟೆವರೆಗೂ ಊಟ ಲಭ್ಯವಿರುತ್ತೆ ಎಂದು ತಿಳಿಸಿದರು.

ಪ್ರತಿ ಕ್ಯಾಂಟೀನ್ ನಲ್ಲಿ ಡಿಜಿಟಲ್ ಡಿಸ್‌ ಪ್ಲೇ ಅಳವಡಿಸಲಾಗುವುದು. ಎಷ್ಟು ಊಟ ಲಭ್ಯವಿದೆ ಅನ್ನುವುದರ ಕುರಿತ ಮಾಹಿತಿ ಆ ಡಿಸ್‌ ಪ್ಲೇ ನಲ್ಲಿ ಮಾಹಿತಿ ಇರಲಿದೆ. ಪ್ರತಿ ಕ್ಯಾಂಟೀನ್ ಗೆ ಹೆಲ್ತ್ ಆಫೀಸರ್ ಇರಲಿದ್ದಾರೆ. ಆಹಾರ ಸುರಕ್ಷತಾ ಇಲಾಖೆಯಿಂದ ಕಾಲ ಕಾಲಕ್ಕೆ ತಪಾಸಣೆ ನಡೆಸುವಂತೆ ಮನವಿ ಮಾಡಲಾಗುವುದು. ಎಲ್ಲಾ ಕ್ಯಾಂಟೀನ್ ನಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪತ್ರಿಕಾಗೋಷ್ಟಿ  ನಡೆಸಿ ಮಾತನಾಡಿದ ಬಿಬಿಎಂಪಿ ಮೇಯರ್ ಪದ್ಮಾವತಿ, ೬೦ ದಿನಗಳಲ್ಲಿ ಇಂದಿರಾ ಕ್ಯಾಂಟೀನ್ ಜಾರಿಗೆ ತರಲಾಗುತ್ತಿದೆ. ಆಗಸ್ಟ್ ೧೬ ರಂದು ಸಿಎಂ ನೇತೃತ್ವದಲ್ಲಿ  ೧೦೧ ಕ್ಯಾಂಟೀನ್ ಉದ್ಘಾಟನೆ ಆಗಲಿದ್ದು,ಈಗಾಗಲೇ ೮೬ ಕ್ಯಾಂಟೀನ್ ಪೂರ್ಣಗೊಂಡಿದೆ. ಇಂದಿರಾ ಕ್ಯಾಂಟೀನ್ ನಿರ್ಮಾಣ ಕೃಪೆ ಸಂಸ್ಥೆ ಹೊಣೆ ಹೊತ್ತಿದೆ. ಪಾಲಿಕೆಯ ೧೧೦ ಹಾಗೂ ವಿವಿಧ ಇಲಾಖೆಗಳಿಂದ ೮೮ ನಿವೇಶನ ಪಡೆಯಲಾಗಿದೆ ಎಂದರು.

Key words: BBMP Commissioner- Manjunath Prasad -inaugurating – Indira cantin – October 16