ಬೆಂಗಳೂರು, ನ.14, 2017 : (www.justkannada.in news ) ಮೈಸೂರು ಬ್ಯಾಂಕ್ ವೃತ್ತದಲ್ಲಿರುವ “ವಿಜಯನಗರ ಹೆಬ್ಬಾಗಿಲು ” ಶಾಶ್ವತ ನಿರ್ಮಾಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೇಯರ್ ಸಂಪತ್ ರಾಜ್ ಆಶ್ವಾಸನೆ ನೀಡಿದರು.

ಮೇಯರ್ ಸಂಪತ್ ರಾಜ್ , ಕನ್ನಡ ಪರ ಹೋರಟಗಾರ ವಾಟಾಳ್ ನಾಗರಾಜ್ ಹಾಗೂ ಕ.ವಿ.ಕಾ.ಅಧ್ಯಕ್ಷ ಎಸ್.ಮನೋಹರ್ ಅವರು ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಮೇಯರ್ ಸಂಪತ್ ರಾಜ್ ಈ ಆಶ್ವಾಸನೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಕನ್ನಡ ಪರ ಹೋರಟಗಾರ ವಾಟಾಳ್ ನಾಗರಾಜ್, ಮೈಸೂರು ಬ್ಯಾಂಕ್ ವೃತ್ತದಲ್ಲಿ ವಿಜಯನಗರ ಹೆಬ್ಬಾಗಿಲಿಗೆ ಇತಿಹಾಸವಿದೆ. 1963ರಲ್ಲಿ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ,ಕೆಂಗಲ್ ಹನುಮಂತಯ್ಯ ,ಟಿ.ಸಿದ್ದಲಿಂಗಯ್ಯ ಆನೇಕ ಗಣ್ಯ ಮಹನೀಯರುಗಳು ಭಾಗವಹಿಸಿದ್ದ ಸ್ಥಳವಾಗಿದೆ .

ಕನ್ನಡ ಪರ ನಾಡು ,ನುಡಿ ಹೋರಟಗಾರರಿಗೆ ಪೇರಕ ಶಕ್ತಿ ,ಅಭಿಮಾನ ಪೂರಕ ಸ್ಥಳ ವಿಜಯನಗರ ಹೆಬ್ಬಾಗಿಲು ,ಈ ಸ್ಥಳದಲ್ಲಿ ಸಾವಿರಾರು ಹೋರಟಗಳು ನಡೆದ ಇತಿಹಾಸವಿರುವ ಸ್ಥಳ .ವಿಜಯನಗರ ಹೆಬ್ಬಾಗಿಲು ಕಟ್ಟಡ ನಿರ್ಮಾಣಕ್ಕೆ ಮಹಾಪೌರರಾದ ಸಂಪತ್ ರಾಜ್ ರವರ ಅವಧಿಯಲ್ಲಿ ಪೂರ್ಣವಾಗಲಿ ಎಂದು ಹೇಳಿದರು .
ಬಳಿಕ ಮೇಯರ್ ಸಂಪತ್ ರಾಜ್ ಮಾತನಾಡಿ, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ವಿಜಯನಗರ ಹೆಬ್ಬಾಗಿಲಿನ ಬಗ್ಗೆ ನನ್ನ ಗಮನಕ್ಕೆ ಬಂತು ,ಹೆಬ್ಬಾಗಿಲು ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಪಾಲಿಕೆ ಸಭೆ ಆನುಮೋದನೆ ಪಡೆದು ಶ್ರೀಘ್ರಗತಿಯಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಸಂಚಾರಕ್ಕೆ ಆನಾನುಕೂಲವಾಗದಂತೆ ಮುಂದಿನ ಆಕ್ಟೋಬರ್ ನಲ್ಲಿ ವಿಜಯನಗರ ಹೆಬ್ಬಾಗಿಲು ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

key words : bangalore-vijayanagara-hebagilu-vatal-nagaraj-kannada-mayor-bbmp