ಬೆಂಗಳೂರು:ಫೆ-13:(www.justkannada.in) ರಾಜಧಾನಿ ಬೆಂಗಳೂರಿನಲ್ಲಿ ದೇಶದ ಮೊದಲ ಬೌಗೋಳಿಕ ವನ( ಜಿಯೋ ಪಾರ್ಕ್) ನಿರ್ಮಾಣವಾಗಲಿದೆ. ಇದು ಭೂಮಿಯ ಸಮಗ್ರ ರಚನೆ ಕುರಿತು ಮಾಹಿತಿ ಒದಗಿಸಲಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಲ್ಲಿ ಜಿಯೋ ಪಾರ್ಕ್ ನಿರ್ಮಾಣಕ್ಕೆ ಸಿದ್ಧತೆ ನಡೆದಿದ್ದು, ಇಲ್ಲಿನ ಮೂರ್‍ನಾಲ್ಕು ಎಕರೆ ಪ್ರದೇಶದಲ್ಲಿ ಅಲ್ಲಲ್ಲಿ ಪೆನೆನ್ಸುಲಾರ್‌ ನೈಸ್‌ ರಾಕ್ ಗಳು ಕಂಡು ಬಂದಿದ್ದು , ಈ ಭಾಗದಲ್ಲಿ ಜಿಯೋ ಪಾರ್ಕ್‌ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಜ್ಞಾನಭಾರತಿಯ ಜೈವಿಕ ವನ (ಬಯೋಪಾರ್ಕ್‌) ವಿಭಾಗವು ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಭೂಮಿಯ ರಚನೆ ಹೇಗಿರುತ್ತದೆ, ಎಷ್ಟು ಪದರ ಇರುತ್ತದೆ, ಭೂಮಿಯ ಆಳದಲ್ಲಿ ಏನಿರುತ್ತದೆ, ಕಲ್ಲುಗಳ ವಿಧ, ಕಲ್ಲು ಮಣ್ಣಾಗುವ ಪ್ರಕ್ರಿಯೆ ಹೀಗೆ ಭೂಮಿ ರಚನೆಗೆ ಸಂಬಂಧಿಸಿದ ವಿವಿಧ ಮಾಹಿತಿ ಜಿಯೋ ಪಾರ್ಕ್‌ನಲ್ಲಿಲಭ್ಯವಿರುತ್ತದೆ.

Image result for jnanabharathi campus bangalore

ಜಿಯೋಲಾಜಿಕಲ್‌ ಸೊಸೈಟಿ ಆಫ್‌ ಇಂಡಿಯಾದ ಪದಾಕಾರಿಯಾಗಿರುವ ನಿವೃತ್ತ ವಿಜ್ಞಾನಿ ರಾಜೇಂದ್ರನ್‌ ಅವರ ಮಾರ್ಗದರ್ಶನದಲ್ಲಿಜಿಯೋಪಾರ್ಕ್‌ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಜಿಯೋ ಪಾರ್ಕ್‌ನಲ್ಲಿಮಾಹಿತಿ ಒದಗಿಸಲು ಪ್ರತ್ಯೇಕ ಆ್ಯಪ್‌ ತಯಾರಿಸಲು ಚಿಂತನೆ ನಡೆದಿದೆ.

25 ವರ್ಷಗಳ ಹಿಂದೆಯೇ ಯುನೆಸ್ಕೋವು ಅಲ್ಲಲ್ಲಿ ಜಿಯೋ ಪಾರ್ಕ್‌ ನಿರ್ಮಿಸಲು ವಿವಿಧ ರಾಷ್ಟ್ರಗಳಿಗೆ ಸೂಚನೆ ನೀಡಿದೆ. ಆದರೆ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇತ್ತೀಚೆಗೆ ಸಾರ್ವಜನಿಕರೊಬ್ಬರು ಹೈಕೋರ್ಟಿನಲ್ಲಿ ಜಿಯೋ ಪಾರ್ಕ್‌ ಕೊರತೆ ಕುರಿತು ಗಮನಸೆಳೆದಿದ್ದರು. ಹೈಕೋರ್ಟ್‌, ಜ್ಞಾನ ಭಾರತಿಯ ಬಯೋಪಾರ್ಕ್‌ ವಿಭಾಗಕ್ಕೆ ಈ ಬಗ್ಗೆ ಪ್ರಾತ್ಯಕ್ಷಿಕತೆ ನೀಡುವಂತೆ ಸೂಚಿಸಿತ್ತು. ಪ್ರಾತ್ಯಕ್ಷಿಕೆ ವೀಕ್ಷಿಸಿದ ಕೋರ್ಟ್‌, ನಮ್ಮಲ್ಲೂ ಅಂತಹ ಸ್ಥಳ ಅಗತ್ಯ ಎಂದು ಅಭಿಪ್ರಾಯಪಟ್ಟಿತ್ತು.

ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ದೇಶದ ಮೊದಲ ಬೌಗೋಳಿಕ ವನ: ಭೂಮಿಯ ಸಮಗ್ರ ರಚನೆ ಕುರಿತು ಸಿಗಲಿದೆ ವಿಶಿಷ್ಠ ಮಾಹಿತಿ

Bangalore University,Jnana Bharathi campus, gio park