ಬೆಂಗಳೂರು ಟರ್ಫ್ ಕ್ಲಬ್ ನಲ್ಲಿ ಡೋಪಿಂಗ್, ಬೆಟ್ಟಿಂಗ್ ಅವ್ಯವಹಾರ: ಆಡಳಿತಾಅಧಿಕಾರಿಗಳೇ ಭಾಗಿ

0
966

ಬೆಂಗಳೂರು:ಏ-21:(www.justkannada.in)ಬೆಂಗಳೂರು ಟರ್ಫ್ ಕ್ಲಬ್ ನಲ್ಲಿ ನಡೆಯುತ್ತಿರುವ ಡೊಪಿಂಗ್, ಬೆಟ್ಟಿಂಗ್ ಹಾಗೂ ಇತರ ಮಾಫಿಯಾ ಅವ್ಯಹಾರಗಳ ಬಗ್ಗೆ ಟರ್ಫ್ ಕ್ಲಬ್ ಅಧ್ಯಕ್ಷರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಟರ್ಫ್ ಕ್ಲಬ್ ನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಬೆಂಗಳೂರಿನ ಟರ್ಫ್ ಕ್ಲಬ್ (ಬಿಟಿಸಿ) ನ ಸಿಇಒ ನಿರ್ಮಲ್ ಪ್ರಸಾದ್ ಸಿಂಗ್, ಚೀಫ್ ಸ್ಟೈಫಂಡರಿ ಸ್ಟುವರ್ಟ್ ಪ್ರದ್ಯುಮ್ನ ಸಿಂಗ್, ವಿವೇಕ್ ಉಬಯ್ ಕರ್, ಅರ್ಜುನ್ ಸಜ್ನಾನಿ ಮತ್ತು ತರಬೇತುದಾರ ನೀಲ್ ದಾರಶ ವಿರುದ್ಧ ಕ್ರಿಮಿನಲ್ ಒಪ್ರಕರಣ ದಾಖಲಾಗಿದೆ. ದೆಹಲಿಯ ರಾಷ್ಟ್ರೀಯ ಡೋಪ್ ಟೆಸ್ಟಿಂಗ್ ಲ್ಯಾಬೋರೇಟರಿ ನೀಡಿದ ವರದಿ ಪ್ರಕಾರ ರೇಸ್ ಕುದುರೆ ಮಾಲೀಕರಾದ ಹೆಚ್ ಎಸ್ ಚಂದ್ರೇಗೌಡ ನೀಡಿದ ದೂರಿನ ಅನ್ವಯ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ಮುಂದುವರೆದಿದೆ.

2016 ಮಾರ್ಚ್ 5ರಂದು ನಡೆದ ರೇಸ್ ನಲ್ಲಿ ಕ್ವೀನ್ ಲತೀಫಾ ಸೇರಿ ಮೂರು ಕುದುರೆಗಳಿಗೆ ಉದ್ದೀಪನಾ ಮದ್ದು ನೀಡಲಾಗಿತ್ತು. ಇದು ಆಡಳಿತ ಮಂಡಳಿ ಗಮನಕ್ಕೆ ಬಂದಿದ್ದು, ಇಬ್ಬರ ವಿರುಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಕ್ವೀನ್ ಲತೀಫಾ, ರಫಾ ಮತ್ತು ಕ್ವಾಸಿರ್ ಗಳು ಓಡಿದ ರಭಸಕ್ಕೆ ಇಡೀ ಟರ್ಫ್ ಕ್ಲಬ್ ದಂಗಾಗಿ ಹೋಗಿತ್ತು. ಇದರಿಂದ ಉಂಟಾದ ಅನುಮಾನದಿಂದ ಈ ಮೂರು ಕುದುರೆಗಳ ಮೂತ್ರ ಸಂಗ್ರಹಿಸಿ ದೆಹಲಿಯ ಡೋಪ್ ಟೆಸ್ಟಿಂಗ್ ಲ್ಯಾಬೋರೇಟರಿಗೆ ಕಳುಹಿಸಿಕೊಟ್ಟಿದ್ದು, ಇಲ್ಲಿ ನಡೆದ ತಪಾಸಣೆ ವೇಳೆ ಈ ಮೂರು ಕುದುರೆಗಳಿಗೆ ಉದ್ದೀಪನ ಮದ್ದು ಚುಚ್ಚಲಾಗಿರುವ ಸಂಗತಿ ಬಹಿರಂಗವಾಗಿತ್ತು. ಪ್ರಕರಣ ಬೆಳಜ್ಕಿಗೆ ಬಂದ ಹಿನ್ನಲೆಯಲ್ಲಿ ಕ್ವಾಸಿರ್ ಮತ್ತು ರಫಾ ತರಬೇತು ದಾರರಾದ ಜಿ ಸಿಂಧು, ಡಾಮ್ನಿಕ್ ಅವರ ವಿರುದ್ಧ ಬಿಟಿಸಿಯ ಬೈಲಾ ಪ್ರಕಾರ ವಿಚಾರಣೆ ನಡೆಸಲಾಗಿದೆ. ಆದರೆ ಕ್ವೀನ್ ಲತೀಫಾ ಪ್ರಕರಣದ ನೀಲ್ ದಾರಶ ನನ್ನು ವಿಚಾರಣೆಗೆ ಒಳಪಡಿಸಿಲ್ಲ. ಇದು ಬೈಲಾ ಉಲ್ಲಂಘನೆಯಾಗಿದ್ದು, ಎಲ್ಲರ ವಿರುದ್ಧವೂ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ದೂರುದಾರ ಹಾಗೂ ಕುದುರೆ ಮಾಲೀಕ ಹೆಚ್ ಎಸ್ ಚಂದ್ರೇಗೌಡ ಅವರ ಒತ್ತಾಯವಾಗಿದೆ.

ಇಂತಹ ಗಂಭೀರ ಪ್ರಕರಣ ನಡೆದಾಗ ಬಿಟಿಸಿ ಚೇರ್ಮನ್ ಹರೀಂದರ್ ಶೆಟ್ಟಿ ಗಮನಕ್ಕೆ ತರಬೇಕು. ಆದರೆ ಅವರ ಗಮನಕ್ಕೂ ತರಲೇ ಲೋಪ ಎಸಗಿರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಸಲಾಗಿದೆ ಎಂಬುದು ಚಂದ್ರೇಗೌಡ ಅಭಿಪ್ರಾಯ. ಒಟ್ಟಿನಲ್ಲಿ ಬೆಂಗಳೂರು ಟರ್ಫ್ ಕ್ಲಬ್ ನಲ್ಲಿನ ಡೋಪಿಂಗ್, ಬೆಟ್ಟಿಂಗ್ ಸೇರಿದಂತೆ ಹಲವು ಅವ್ಯಹಾರ ಪ್ರಕರಣಗಳು ನಡೆಯುತ್ತಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
Bangalore Turf Club,doping and betting mafia
Bangalore Turf Club chairman writes to CM, alleges illegal activities at the club; says officials are involved with doping and betting mafia, among other things

The Bangalore Turf Club (BTC), which till date has avoided any association with the state government, has now sought its intervention. In an unprecedented move, the BTC chairman has written a letter to chief minister Siddaramaiah about the “wrongdoings at the club’’, and has sought his intervention.