ಏ.23 ರಂದು ಎಲೆಕ್ಷನ್ : `ಬೆಂಗಳೂರು ಪ್ರೆಸ್ ಕ್ಲಬ್ ‘ ನಲ್ಲಿ ಗರಿಗೆದರಿದ ಚುನಾವಣಾ ಚಟುವಟಿಕೆ…!

0
3955
bangalore-press-club-election-april.23-media-journalist-PCB

bangalore-press-club-election-april.23-media-journalist-PCB

ಬೆಂಗಳೂರು, ಏ.18, 2017 : (www.justkannada.in news ) ಪ್ರತಿಷ್ಠಿತ ` ಬೆಂಗಳೂರು ಪ್ರೆಸ್ ಕ್ಲಬ್‌-PCB ‘ ನಲ್ಲಿ ಎರಡು ವರ್ಷಗಳ ನಂತರ ಮತ್ತೆ ಚುನಾವಣಾ ಚಟುವಟಿಕೆ ಗರಿಗೆದರಿದೆ.

ಇದೇ ಏಪ್ರಿಲ್ ೨೩ರಂದು ಪ್ರೆಸ್ ಕ್ಲಬ್ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ನಾಮ ಪತ್ರ ಸಲ್ಲಿಸಿ ಹಿಂಪಡೆಯಲು ನಿನ್ನೆ (ಏ.17) ಕಡೆಯ ದಿನವಾಗಿತ್ತು. ಇದೀಗ ಅಂತಿಮವಾಗಿ ಚುನಾವಣ ಕಣದಲ್ಲಿ ಕ್ಲಬ್ ನ ಹಿರಿಯ ಸದಸ್ಯರಾದ ಸದಾಶಿವ ಶೆಣೈ, ಶರಣುಕುಮಾರ್, ಎಚ್.ಆರ್.ರವೀಶ್ ಹಾಗೂ ಶಿವಕುಮಾರ್ ಬೆಳ್ಳಿತಟ್ಟೆ ಸೇರಿದಂತೆ ೨೦ ಮಂದಿ ಸ್ಪರ್ಧಿಸಿದ್ದು ವಿವಿಧ ಹುದ್ದೆಗಳಿಗೆ ಆಯ್ಕೆ ಬಯಸಿದ್ದಾರೆ.

೧೨ ಹುದ್ದೆಗಳಿಗೆ ಚುನಾವಣೆ ನಡೆಯಬೇಕಿದ್ದು, ಸದ್ಯ ಖಜಾಂಜಿ ಸ್ಥಾನಕ್ಕೆ ಬಿ.ಎನ್.ರಮೇಶ್, ಕಾರ್ಯಕಾರಿ ಸಮಿತಿ ಮೀಸಲು ಸದಸ್ಯೆ ಹುದ್ದೆಗೆ ಜ್ಯೋತಿ ಇರುವರ್ತೂರು ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದಂತೆ ೨೦ಮಂದಿ ಕಣದಲ್ಲಿದ್ದು, ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ನಿಯಮದಂತೆ ಪ್ರತಿವರ್ಷ ಏಪ್ರಿಲ್‌ನಲ್ಲಿ ಪ್ರೆಸ್‌ಕ್ಲಬ್ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಡೆಯಬೇಕು. ಆದರೆ ಪ್ರೆಸ್ ಕ್ಲಬ್‌ನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ ಎಂದು ಆರೋಪಿಸಿ ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ೮ ಮಂದಿ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದರು. ಇದರಿಂದ ಉಳಿದ ಪದಾಧಿಕಾರಿಗಳಾದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಅವರು ಸಹ ಸದಸ್ಯರನ್ನು ನೇಮಕ ಮಾಡಿಕೊಂಡಿದ್ದರು.

bangalore-press-club-election-april.23-media-journalist-PCB

ಇದು ಅಕ್ರಮ ಎಂದು ರಾಜೀನಾಮೆ ಸಲ್ಲಿಸಿದ್ದವರು ಆರೋಪಿಸಿದ್ದರು. ಆದರೂ ಮೂವರು ಪದಾಧಿಕಾರಿಗಳು ಸಹಸದಸ್ಯರೊಂದಿಗೆ ಹೆಚ್ಚುವರಿ ಒಂದು ವರ್ಷ ಅಧಿಕಾರ ಅನುಭವಿಸಿದ್ದರು. ಬಳಿಕ ಸದಸ್ಯರ ಒತ್ತಾಯದ ಮೇರೆಗೆ ಚುನಾವಣೆ ಘೋಷಣೆ ಮಾಡಲಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಸದಾಶಿವ ಶೆಣೈ, ಶರಣಕುಮಾರ್ ಬಿ.ಆರ್., ವೆಂಕಟೇಶ್ ಕೆ. ಉಪಾಧ್ಯಕ್ಷ ಸ್ಥಾನಕ್ಕೆ ದೊಡ್ಡ ಬೊಮ್ಮಯ್ಯ, ಕೇಶವ ವಿಟ್ಲ, ಉದಯ ಟಿವಿಯ ಹಿರಿಯ ಸುದ್ದಿ ನಿರ್ಮಾಪಕ ರವೀಶ್ ಎಚ್.ಆರ್. ಸ್ಪರ್ಧಿಸಿದ್ದಾರೆ.

ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಕನ್ನಡ ಪ್ರಭದ ಹಿರಿಯ ವರದಿಗಾರ ಶಿವಕುಮಾರ್ ಬೆಳ್ಳಿತಟ್ಟೆ, ಅಶೋಕ್‌ಕುಮಾರ್ ವೈ.ಜಿ., ಕಿರಣ್ ಎಚ್.ವಿ. ಮತ್ತು ವಿಶ್ವನಾಥ್ ಭಾಗವತ್ ಕಣಕ್ಕಿಳಿದಿದ್ದಾರೆ.

ಕಾರ್ಯದರ್ಶಿ ಹುದ್ದೆಗೆ ದೇವಿಪ್ರಸಾದ್ ರೈ, ರಿಜ್ವಾನ್ ಎಂ.ಕೆ., ಸಚಿವ ಶ್ರೀಧರ್, ಸಾಂಬಸದಾಶಿವ ರೆಡ್ಡಿ ಸ್ಪರ್ಧೆ ಒಡ್ಡಿದ್ದಾರೆ.
ಈ ಬಾರಿ ಜಂಟಿ ಕಾರ್ಯದರ್ಶಿ ಹುದ್ದೆಯನ್ನು ಹೆಚ್ಚುವರಿಯಾಗಿ ಸೃಷ್ಟಿಸಲಾಗಿದ್ದು, ಇದಕ್ಕೆ ಕ್ರಿಸ್ಟಫರ್ ಹೂವರ್, ಜನಾರ್ದನಚಾರಿ, ನಾಗೇಶ್ ಪೊಳಲಿ, ಸೋಮಶೇಖರ್ ಕೆ.ಎಸ್. ಆಯ್ಕೆ ಬಯಸಿದ್ದಾರೆ.

ಉಳಿದಂತೆ ಕಾರ್ಯಕಾರಿ ಸಮಿತಿಯ ೬ ಸದಸ್ಯ ಸ್ಥಾನಕ್ಕೆ ೧೨ಮಂದಿ ಸ್ಪರ್ಧಿಸಿದ್ದಾರೆ.
key words : bangalore-press-club-election-april.23-media-journalist-PCB