ಬೆಳಗಾವಿ, ನ.14, 2017 : (www.justkannada.in news ): ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾರ್ಯ ಮೂರು ವಾರಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಲೋಕೋಪಯೋಗಿ ಸಚಿವ ಡಾ. ಎಚ್ ಸಿ ಮಹದೇವಪ್ಪ ಭರವಸೆ ನೀಡಿದರು.

ವಿಧಾನ ಪರಿಷತ್ ನಲ್ಲಿ ಮಂಗಳವಾರ ಜೆಡಿಎಸ್ ಸದಸ್ಯ ಕೆ ಟಿ ಶ್ರೀಕಾಂತೇಗೌಡ ಅವರ ಪ್ರಶ್ನಿಗೆ ಉತ್ತರಿಸಿದ ಮಹದೇವಪ್ಪ ಹೇಳಿದಿಷ್ಟು….
ಮಳೆಯಿಂದಾಗಿ ಹೆದ್ದಾರಿ ರಸ್ತೆ ಹಾಳಾಗಿದೆ. ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಈಗಗಾಲೇ ಸೂಚನೆ ನೀಡಲಾಗಿದ್ದು, ಮುಂದಿನ ಮೂರು ವಾರಗಳಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೀಘ್ರದಲ್ಲೇ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಷಟ್ಪಥ ರಸ್ತೆಯನ್ನಾಗಿ ಪರಿವರ್ತಿಸುವ ಕಾರ್ಯ ಆರಂಭಿಸಲಿದೆ. ಜನವರಿಯಲ್ಲಿ ಯೋಜನೆಗೆ ಜಾಲನೆ ಸಿಗಲಿದೆ.

ಶಿರಾಡಿ ಘಾಟ್ ರಸ್ತೆಯ ದುರಸ್ತಿ ಕಾರ್ಯ ಮುಂದಿನ ಜನವರಿಯಲ್ಲಿ ಆರಂಭಿಸಿ ಏಪ್ರಿಲ್ ವೇಳೆಗೆ ಪೂರ್ಣಗೊಳಿಸಲಾವುದು ಎಂದರು.

 

key words : bangalore-h.c.mahadevappa-mysore-highway-road-repair