ಕಲ್ಬುರ್ಗಿ,ಏ,20,2017(www.justkannada.in): ಬಾಬ್ರಿ ಮಸೀದಿ  ಧ್ವಂಸಕ್ಕೆ ಸಂಚು ರೂಪಿಸಿದ್ದ ಪ್ರಕರಣ ಸಂಬಂಧ ಕೇಂದ್ರ ಸಚಿವೆ  ಉಮಾಭಾರತಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.Babri mosque- demolition case- Minister Uma Bharti- should resign

ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ, ಸಚಿವೆ ಉಮಾಭಾರತಿ ಸೇರಿ 13 ಮಂದಿ ನಾಯಕರ ವಿರುದ್ದ ವಿಚಾರಣೆಗೆ ಸುಪ್ರೀಂಕೋರ್ಟ್ ನಿನ್ನೆ ಒಪ್ಪಿಗೆ ಸೂಚಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ವಿರುದ್ದ ಕ್ರಿಮಿನಲ್ ಕೇಸ್ ದಾಖಲಾಗಿದೆ.

ಈ ಕುರಿತು ಕಲ್ಬುರ್ಗಿಯಲ್ಲಿ ಇಂದು ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ  ಉಮಾಭಾರತಿ ಅಧಿಕಾರದಲ್ಲಿದ್ದವರು.ಅವರು ಕೂಡಲೇ ರಾಜೀನಾಮೆ ನೀಡಬೇಕು.ಬೇರೆಯವರ ಮೇಲೆ ಆರೋಪ ಬಂದಾಗ ಬಿಜೆಪಿ ರಾಜೀನಾಮೆ ಕೇಳಿತ್ತು. ಈ ಹಿಂದೆ  ಬಿಜೆಪಿ ರಾಜೀನಾಮೆ ಕೇಳಿತ್ತು. ಈಗ ಅವರ ಮೇಲೆ ಆರೋಪ ಬಂದಿದೆ. ಅವರು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಹೈಕಮಾಂಡ್ ನಿರ್ಧರಿಸುತ್ತೆ…

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಖರ್ಗೆ ಕೆಪಿಸಿಸಿ ಅಧ್ಯಕ್ಷರನ್ನ ಹೈಕಮಾಂಡ್ ನಿರ್ಧರಿಸುತ್ತೆ. ಸದ್ಯ  ಅಧ್ಯಕ್ಷರ ಬದಲಾವಣೆ ಇಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಹೈಕಮಾಂಡ್  ಯಾರನ್ನ ನೇಮಕ ಮಾಡ್ತಾರೆ ಕಾದು ನೋಡಬೇಕು ಎಂದರು.

Key words: Babri mosque- demolition case- Minister Uma Bharti- should resign