ಚೆನ್ನೈ:ಮಾ-12:(www.justkannada.in) ಎಸ್ ಎಸ್ ರಾಜಮೌಳಿ ಅವರ ಬಹುನಿರೀಕ್ಷಿತ ಚಿತ್ರ ‘ಬಾಹುಬಲಿ 2’ ಸಿನೆಮಾದ ಟ್ರೇಲರ್ ಮಾರ್ಚ್ 16 ಕ್ಕೆ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ.

ರಾಜಮೌಳಿ ಮತ್ತು ನಿರ್ಮಾಪಕ ಶೋಭು ಯರ್ಲಗಡ್ಡ ಅವರ ಜೊತೆಗೆ ನಡೆದ ಫೇಸ್ಬುಕ್ ಚಾಟ್ ನಲ್ಲಿ, ಮಾರ್ಚ್ 16 ರಂದು ಆಂಧ್ರ ಪ್ರದೇಶ ಮತ್ತು ತೆಲಗಾಂಣದಲ್ಲಿ ಚಿತ್ರಮಂದಿರಗಳಲ್ಲಿ ಬೆಳಗ್ಗೆ 9 ರಿಂದ 10 ರೊಳಗೆ ಟ್ರೇಲರ್ ಬಿಡುಗಡೆ ಮಾಡುವ ಯೋಜನೆಯನ್ನು ಧೃಢೀಕರಿಸಿದ್ದಾರೆ. ಅಲ್ಲದೇ ಅಂದು ಸಂಜೆ 5 ಘಂಟೆಗೆ ಟ್ರೇಲರ್ ಅಂತರ್ಜಾಲದಲ್ಲಿ ಕೂಡ ಬಿಡುಗಡೆಯಾಗಲಿದೆ.

ಇನ್ನು ಬಾಹುಬಲಿ-2 ಚಿತ್ರ ವಿಶ್ವದಾದ್ಯಂತ ಏಪ್ರಿಲ್ 28ಕ್ಕೆ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ-ನಿರ್ಮಾಪಕರು ತಿಳಿಸಿದ್ದಾರೆ.

ಪ್ರಭಾಸ್, ರಾಣಾ ದಗ್ಗುಬಾಟಿ, ತಮನ್ನಾ ಭಟಿಯಾ, ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣ ಮತ್ತು ಸತ್ಯರಾಜ್ ನಟಿಸಿರುವ ಈ ಸಿನೆಮಾ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
Baahubali 2,trailer release,S.S. Rajamouli