ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ಆಯುಧ ಮತ್ತು ಪಟ್ಟದ ಪ್ರಾಣಿಗಳಿಗೆ ರಾಜವಂಶಸ್ಥ ಯದುವೀರ್ ರಿಂದ ಪೂಜೆ ಸಲ್ಲಿಕೆ…

ಮೈಸೂರು,ಅ,7,2019(www.justkannada.in):  ಇಂದು ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ. ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಕಳೆಗಟ್ಟಿದ್ದು ಯುದ್ಧಸಲಕರಣೆಗಳು ಮತ್ತು ಪಟ್ಟದ ಆನೆ, ಕುದುರೆಗಳಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಿದರು.

ಅರಮನೆ ಖಾಸ ಆಯುಧಗಳಿಗೆ ಕೋಡಿ‌ ಸೋಮೇಶ್ವರ ದೇಗುಲದಲ್ಲಿ‌ ಪೂಜೆ ನಡೆಸಲಾಯಿತು. ಪಾರಂಪರಿಕ ಆಯುಧಗಳನ್ನು ದೇವಾಲಯಲ್ಲಿರಿಸಿ ಅಲಂಕರಿಸಿ ರಾಜಪುರೋಹಿತರು ಪೂಜೆ ನೆರೆವೇರಿಸಿದರು. ನಂತರ  ದೇಗುಲದಿಂದ ಅರಮನೆಯ ಕಲ್ಯಾಣ ಮಂಟಪಕ್ಕೆ ಆಯುಧಗಳನ್ನ ರವಾನೆ  ಮಾಡಲಾಯಿತು. ಗಿರಿಜಾ ಕಲ್ಯಾಣ ಮಂಟಪದಲ್ಲಿ ಆಯುಧಗಳಾದ ಕತ್ತಿ, ಗುರಾಣಿ, ಈಡಿ, ಭರ್ಜಿ, ಸೇರಿದಂತೆ ಯುಧ್ದ ಸಲಕರಣೆಗಳಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಿದರು.

ಅಂಬಾವಿಲಾಸ ತೊಟ್ಟಿಯಲ್ಲಿ ಪಟ್ಟದ ಆನೆ, ಹಸು, ಒಂಟೆ, ಕುದುರೆಗಳಿಗೆ ಪೂಜೆ ಸಲ್ಲಿಸಲಾಯಿತು. ಹಾಗೆಯೇ ಶ್ರೀಕಂಠದತ್ತ ಒಡೆಯರ್ ಬಳಸುತ್ತಿದ್ದ ಕಾರುಗಳು‌ ಸೇರಿದಂತೆ ಫಿರಂಗಿ ಹಾಗೂ ಪಟ್ಟದ ಪ್ರಾಣಿಗಳಿಗೆ ಪೂಜೆ ಸಲ್ಲಿಸಲಾಯಿತು. ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್  ಚಂಡಿಕಾ ಹೋಮ ಪೂರ್ಣಾವತಿಯಲ್ಲಿ ಪಾಲ್ಗೊಂಡರು. ಪೂರ್ಣಾಹುತಿ‌ ನಂತರ ಆಯುಧಗಳಿಗೆ ಪೂಜೆ ನೆರವೇರಿಸಲಾಯಿತು. ಸಂಪ್ರದಾಯದಂತೆ ಅರಮನೆಯಲ್ಲಿ ಪೂಜಕೈಂಕರ್ಯ ನೆರವೇರುತ್ತಿದೆ.

Key words: ayudha pooja-Mysore Palace-Dynasty -Yaduveer   Worship – weapons