ನವದೆಹಲಿ, ಜನವರಿ 28 (www.justkannada.in): ಮುಂದಿನ 20 ವರ್ಷಗಳಲ್ಲಿ ಚಾಕೋಲೇಟ್‌ ಕಣ್ಮರೆಯಾಗಲಿದೆ!

ಯೆಸ್. ಸ್ವಲ್ಪ ಕಷ್ಟ ಆದ್ರೂ ಇದನ್ನು ನಂಬಲೇ ಬೇಕು. ಹವಾಮಾನ ಬದಲಾವಣೆಯಿಂದಾಗಿ ಚಾಕೋಲೇಟ್‌ 2040ರ ವೇಳೆಗೆ ಕಣ್ಮರೆಯಾಗಲಿದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಕೋಕೋ ಗಿಡ ಬೆಳೆಯಲು ಜಾಸ್ತಿ ನೀರಿನ ಅಗತ್ಯವಿದೆ. ಆದರೆ ಬದಲಾದ ವಾತಾವರಣದಲ್ಲಿ ಕೋಕೋ ಗಿಡಕ್ಕೆ ಪೂರಕವಾದ ವಾತಾವರಣ ಲಭ್ಯವಾಗುವುದಿಲ್ಲ ಎನ್ನುತ್ತಿದ್ದಾರೆ ತಜ್ಞರು.

ಮುಂದಿನ 20 ವರ್ಷಗಳಲ್ಲಿ ತಾಪಮಾನ ಇನ್ನಷ್ಟು ಜಾಸ್ತಿಯಾಗಲಿದ್ದು, ಮಳೆ ಪ್ರಮಾಣ ಇನ್ನಷ್ಟು ಕಡಿಮೆಯಾಗಲಿದೆ. ಆಗ ಕೋಕೋ ಬೆಳೆಯು ಕಡಿಮೆಯಾಗಲಿದ್ದು, ಚಾಕೋಲೇಟ್‌ ಉದ್ಯಮವೇ ಸ್ಥಗಿತಗೊಳ್ಳುವ ಪರಿಸ್ಥಿತಿ ಎದುರಾಗಲಿದೆ ಎಂದು ಯುಎಸ್ ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲದ ಆಡಳಿತ ಮಂಡಳಿ ವರದಿ ನೀಡಿದೆ.