FTII ಅಧ್ಯಕ್ಷರಾಗಿ ನಟ ಅನುಪಮ್ ಖೇರ್ ನೇಮಕ…!

0
1376
Anupam Kher -replaces- Gajendra Chauhan- FTII chairman

 Anupam Kher -replaces- Gajendra Chauhan- FTII chairman

ನವದೆಹಲಿ, ಅ.11,2017 : (www.justkannada.in news ) ಪುಣೆಯ ಭಾರತೀಯ ಚಲನಚಿತ್ರ ಹಾಗೂ ದೂರದರ್ಶನ ಸಂಸ್ಥೆ (ಎಫ್‌ಟಿಐಐ)ಯ ಅಧ್ಯಕ್ಷರಾಗಿ ನಟ ಅನುಪಮ್ ಖೇರ್‌ ನೇಮಕಗೊಂಡಿದ್ದಾರೆ.

ಬಿಜೆಪಿ ಸದಸ್ಯ ಹಾಗೂ ಕಿರುತೆರೆ ಕಲಾವಿದ ಗಜೇಂದ್ರ ಚೌಹಾಣ್‌ 2015ರಿಂದ ಎಫ್‌ಟಿಐಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇದೇ ಮಾರ್ಚ್‌ನಲ್ಲಿ ಅವರ ಅಧಿಕಾರ ಅವಧಿ ಪೂರ್ಣಗೊಂಡಿತ್ತು. ಇದೀಗ ಅಧ್ಯಕ್ಷ ಸ್ಥಾನಕ್ಕೆ ಅನುಪಮ್‌ ಖೇರ್‌ ನೇಮಕವಾಗಿದ್ದಾರೆ.

ಹಾಲಿವುಡ್, ಬಾಲಿವುಡ್‌ ಸೇರಿ ಹಲವು ಚಿತ್ರರಂಗಗಳ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅನುಪಮ್ ಖೇರ್ ಅಭಿನಯಿಸಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದ್ದಾರೆ. ರಂಗಭೂಮಿ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿರುವ ಅವರು ಈ ಹಿಂದೆ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷರೂ ಆಗಿದ್ದರು.

key words : Anupam Kher -replaces- Gajendra Chauhan- FTII chairman